Home Bibles ಸಾಮೇತಿಗಳು 25:12 · ಕನ್ನಡ ಬೈಬಲ್
ಸಾಮೇತಿಗಳು 25:12 · ಕನ್ನಡ ಬೈಬಲ್

ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ.

Cross references

1 ಸಮುವೇಲ 25:31

ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು.

ಯೋಬ 42:11

ಆಗ ಅವನ ಸಹೋದರರೆಲ್ಲರೂ ಅವನ ಸಹೋದರಿಯರೆಲ್ಲರೂ ಮುಂಚಿನ ಅವನ ಪರಿಚಿತಿಯವರೆಲ್ಲರೂ ಅವನ ಬಳಿಗೆ ಬಂದು ಅವನ ಸಂಗಡ ಅವನ ಮನೆಯಲ್ಲಿ ರೊಟ್ಟಿ ತಿಂದು, ಕರ್ತನು ಅವನ ಮೇಲೆ ಬರಮಾಡಿದ ಎಲ್ಲಾ ಕೇಡಿಗೋಸ್ಕರ ಅವನ ಸಂಗಡ ದುಃಖಪಟ್ಟು ಅವನನ್ನು ಸಂತೈಸಿದರು. ಅವರು ಅವನಿಗೆ ಪ್ರತಿ ಮನುಷ್ಯನು ಒಂದು ಹಣವನ್ನೂ ಬಂಗಾರದ ಒಂದು ಉಂಗುರವನ್ನೂ ಕೊಟ್ಟರು.

ಕೀರ್ತನೆಗಳು 141:5

ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.

ಸಾಮೇತಿಗಳು 1:8

ನನ್ನ ಮಗನೇ, ನಿನ್ನ ತಂದೆಯ ಶಿಕ್ಷಣವನ್ನು ಕೇಳು, ನಿನ್ನ ತಾಯಿಯ ಕಟ್ಟಳೆಯನ್ನು ತೊರೆಯಬೇಡ;

ಸಾಮೇತಿಗಳು 9:8

ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.

ಸಾಮೇತಿಗಳು 15:5

ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;

ಸಾಮೇತಿಗಳು 15:31

ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ.

ಸಾಮೇತಿಗಳು 20:12

ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.

ಸಾಮೇತಿಗಳು 27:5

ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.

Interlinear

Choose Theme