ಕೆಡುಕನಿಗೆ ಪ್ರತಿ ಫಲವು ಇರುವದಿಲ್ಲ; ದುಷ್ಟರ ದೀಪವು ಆರಿಹೋಗು ವದು.
Cross references
ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು.
ಎಷ್ಟು ಸಾರಿ ದುಷ್ಟರ ದೀಪವು ಆರಿ ಹೋಗುತ್ತದೆ; ಅವರ ನಾಶನವು ಅವರ ಮೇಲೆ ಬರುತ್ತದೆ; ದೇವರು ವೇದನೆಗಳನ್ನು ತನ್ನ ಕೋಪ ದಿಂದ ಹಂಚುತ್ತಾನೆ.
ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.
ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
ಅವರು ಹುಲ್ಲಿನ ಹಾಗೆ ಬೇಗ ಕೊಯ್ಯಲ್ಪಟ್ಟು ಹಸುರಾದ ಸೊಪ್ಪಿನ ಹಾಗೆ ಬಾಡಿಹೋಗುವರು.
ನೀತಿವಂತರ ಬೆಳಕು ಸಂತೋಷಿಸುತ್ತದೆ; ದುಷ್ಟರ ದೀಪವು ಆರಿ ಹೋಗುವದು.
ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.
ಖಂಡಿತವಾಗಿಯೂ ಅಂತ್ಯವು ಬರು ತ್ತದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಯಲ್ಲಿ ದೊಬ್ಬಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು.
ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ ಸಮುದ್ರದ ಹುಚ್ಚು ತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರ ಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ ಇಟ್ಟಿರುವದು.