Home Bibles ಸಾಮೇತಿಗಳು 24:19 · ಕನ್ನಡ ಬೈಬಲ್
ಸಾಮೇತಿಗಳು 24:19 · ಕನ್ನಡ ಬೈಬಲ್

ಕೆಟ್ಟವರ ಮೇಲೆ ಉರಿಗೊಳ್ಳಬೇಡ; ಇಲ್ಲವೆ ದುಷ್ಟ ರಿಗಾಗಿ ಅಸೂಯೆಪಡಬೇಡ;

Cross references

ಅಂಕೆಗಳ ಪುಸ್ತಕ 16:26

ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು.

ಕೀರ್ತನೆಗಳು 1:1

ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ

ಕೀರ್ತನೆಗಳು 26:4

ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.

ಕೀರ್ತನೆಗಳು 37:1

ದುರ್ಮಾರ್ಗಿಗಳಿಗೋಸ್ಕರ ಕೋಪಿಸಿ ಕೊಳ್ಳಬೇಡ; ಇಲ್ಲವೆ ನೀನು ಅಕ್ರಮ ಮಾಡುವವರಿಗೆ ವಿರೋಧವಾಗಿ ಹೊಟ್ಟೇಕಿಚ್ಚು ಪಡ ಬೇಡ.

ಕೀರ್ತನೆಗಳು 73:3

ದುಷ್ಟರ ಅಭಿವೃದ್ಧಿಯನ್ನು ನೋಡಿದಾಗ ಮೂರ್ಖರ ಮೇಲೆ ಹೊಟ್ಟೇಕಿಚ್ಚು ಪಟ್ಟೆನು.

ಕೀರ್ತನೆಗಳು 119:115

ಕೇಡು ಮಾಡುವವರೇ, ನನ್ನಿಂದ ತೊಲಗಿರಿ; ನನ್ನ ದೇವರ ಆಜ್ಞೆಗಳನ್ನು ಕೈಕೊಳ್ಳುವೆನು.

ಸಾಮೇತಿಗಳು 13:20

ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗಿರುವನು. ಬುದ್ಧಿ ಹೀನರ ಜೊತೆಗಾರನು ನಾಶವಾಗುವನು.

ಸಾಮೇತಿಗಳು 23:17

ಪಾಪಿಗಳಿಗಾಗಿ ನಿನ್ನ ಹೃದಯವು ಅಸೂಯೆಪಡದಿರಲಿ; ನೀನು ದಿನವೆಲ್ಲಾ ಕರ್ತನ ಭಯ ದಲ್ಲಿ ಇರು.

ಸಾಮೇತಿಗಳು 24:1

ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆಪಡದಿರು; ಇಲ್ಲವೆ ಅವರ ಸಂಗಡ ಇರುವದಕ್ಕೆ ಅಪೇಕ್ಷಿಸಬೇಡ;

2 ಕೊರಿಂಥದವರಿಗೆ 6:17

ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

ಎಫೆಸದವರಿಗೆ 5:11

ತ್ತಲೆಗೆ ಸಂಬಂಧ ವಾದ ಕೃತ್ಯಗಳಿಂದ ಯಾವ ಫಲವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಖಂಡಿಸಿರಿ.

2 ತಿಮೋಥೆಯ 3:2

ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ

ಪ್ರಕಟನೆ 18:4

ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.

Interlinear

Choose Theme