ನಿನ್ನ ತಂದೆ ತಾಯಿಗಳು ಸಂತೋಷಿಸುವರು; ನಿನ್ನನ್ನು ಹೆತ್ತ ವರು ಆನಂದಿಸುವರು.
Cross references
ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ.
ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
ನನ್ನ ಮಗನೇ, ನಿನ್ನ ಹೃದಯವು ಜ್ಞಾನ ವುಳ್ಳದ್ದಾಗಿದ್ದರೆ ನನ್ನ ಹೃದಯವು ಹೌದು, ನನ್ನದೇ ಹರ್ಷಿಸುವದು.
ನಿನ್ನನ್ನು ನಿಂದಿಸುವವರಿಗೆ ಉತ್ತರಿಸುವಂತೆ ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ನನ್ನ ಮಗನೇ, ಜ್ಞಾನಿಯಾಗಿರು.
ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು.
ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಸಬೇತಳನ್ನು ವಂದಿಸಿದಳು.
ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.
ಇದಾದ ಮೇಲೆ ಆತನು ಇವುಗಳನ್ನು ಹೇಳು ತ್ತಿದ್ದಾಗ ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನು ಎತ್ತಿ ಆತನಿಗೆ--ನಿನ್ನನ್ನು ಹೊತ್ತ ಗರ್ಭವೂ ನೀನು ಕುಡಿದ ಮೊಲೆಗಳೂ ಧನ್ಯವಾದವುಗಳು ಎಂದು ಹೇಳಿದಳು.