ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
Cross references
ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು, ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ, ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು; ಅವನು ನಿನ್ನನ್ನು ಆಳುವನು ಅಂದನು.
ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ ಆ ಕಾರ್ಯವನ್ನು ಮಾಡು ವದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
ಆದರೆ ಅವಳು ಅದಕ್ಕೆ ಪ್ರತ್ಯುತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರುವಶ ವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಸತ್ತುಹೋದದರಿಂದಲೂ ಮಹಿಮೆಯು ಇಸ್ರಾಯೇ ಲನ್ನು ಬಿಟ್ಟುಹೋಯಿತು ಎಂದು ಹೇಳಿ ಆ ಕೂಸಿಗೆ ಈಕಾಬೋದ್ ಎಂದು ಹೆಸರಿಟ್ಟಳು.ದೇವರ ಮಂಜೂಷವು ಶತ್ರುವಶವಾಗಿ ಹೋದದರಿಂದ ಮಹಿ ಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿದಳು.
ಅವನು ತನ್ನ ಹೆಂಡತಿಯನ್ನು ಕೂಡಿದಾಗ ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯನೆಂಬ ಹೆಸರಿಟ್ಟನು.
ನಿನ್ನ ತಂದೆ ತಾಯಿಗಳು ಸಂತೋಷಿಸುವರು; ನಿನ್ನನ್ನು ಹೆತ್ತ ವರು ಆನಂದಿಸುವರು.
ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.
ಅಲ್ಲಿಯವರು ಥೆಸಲೊನೀಕದವರಿಗಿಂತ ಸದ್ಗುಣ ವುಳ್ಳವರಾಗಿದ್ದು ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀ ಕರಿಸಿ ಇವರು ಹೇಳುವ ಮಾತುಗಳು ಹೌದೋ ಏನೋ ಎಂದು ಪ್ರತಿದಿನವೂ ಬರಹಗಳನ್ನು ಶೋಧಿ ಸುತ್ತಿದ್ದರು.