ಮನುಷ್ಯನ ಮಾರ್ಗಗಳೆಲ್ಲಾ ತನ್ನ ಕಣ್ಣುಗಳ ಮುಂದೆ ಶುದ್ಧವಾಗಿವೆ; ಕರ್ತನು ಆತ್ಮಗಳನ್ನು ತೂಗಿಸುತ್ತಾನೆ.
Cross references
ಕರ್ತನ ದೂತನು ಅವನಿಗೆ ಹೇಳಿದ್ದು--ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಯಾಕೆ? ಇಗೋ, ನಿನ್ನ ಮಾರ್ಗ ನನ್ನ ಮುಂದೆ ವಕ್ರವಾಗಿರುವದರಿಂದ ನಾನು ಎದುರಾಳಿ ಯಾಗಿ ಹೊರಟೆನು.
ಆಗ ತಮ್ಮ ಕೈಯಿಂದ ತೆಗೆದುಕೊಂಡು ತಮ್ಮ ಬಾಯಿಗೆ ಎತ್ತಿ ನೆಕ್ಕಿದವರ ಲೆಕ್ಕವು ಮುನ್ನೂರು ಜನವಾಗಿತ್ತು. ಉಳಿದ ಜನರೆಲ್ಲಾ ನೀರು ಕುಡಿಯುವದಕ್ಕೆ ಮೊಣಕಾಲೂರಿ ಬೊಗ್ಗಿದರು.
ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು.
ಸಮುವೇಲನು ಸೌಲನ ಬಳಿಗೆ ಬಂದಾಗ ಸೌಲನು ಅವನಿಗೆ--ನಿನಗೆ ಕರ್ತನ ಆಶೀರ್ವಾದವಾಗಲಿ; ನಾನು ಕರ್ತನ ಆಜ್ಞೆಯನ್ನು ಈಡೇರಿಸಿದೆನು ಅಂದನು.
ಆದರೆ ಕರ್ತನು ಸಮುವೇಲನಿಗೆ--ನೀನು ಅವನ ರೂಪವನ್ನೂ ಅವನ ದೇಹದ ಉದ್ದವನ್ನೂ ದೃಷ್ಟಿಸಬೇಡ; ಅವನನ್ನು ನಾನು ತಿರಸ್ಕರಿಸಿದೆನು; ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು ಅಂದನು.
ಹಗೆಗೆ ತಕ್ಕ ತನ್ನ ಅಕ್ರಮವನ್ನು ಕಂಡುಕೊಳ್ಳುವವರೆಗೆ ಅವನು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ.
ಮನುಷ್ಯನ ಮಾರ್ಗ ಗಳು ಕರ್ತನ ಕಣ್ಣುಗಳ ಮುಂದೆಯೇ ಅವೆ; ಆತನು ಅವನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾನೆ.
ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು; ಅದರ ಅಂತ್ಯವು ಮರಣದ ಮಾರ್ಗವೇ.
ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
ತನ್ನ ದೃಷ್ಟಿ ಯಲ್ಲಿ ಮನುಷ್ಯನ ಪ್ರತಿಯೊಂದು ಮಾರ್ಗವು ಸರಿ ಯಾಗಿದೆ; ಕರ್ತನು ಹೃದಯಗಳನ್ನು ಪರೀಕ್ಷಿಸುತ್ತಾನೆ.
ನೀನು--ಇಗೋ, ಅದು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಹೃದಯವನ್ನು ಪರಿಶೋಧಿಸುವಾತನು ಅದನ್ನು ಯೋಚಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ಅದನ್ನು ತಿಳಿಯುವದಿಲ್ಲವೋ? ಪ್ರತಿ ಯೊಬ್ಬನಿಗೆ ತನ್ನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ.
ನೀತಿವಂತನ ಮಾರ್ಗವು ಯಥಾರ್ಥವಾಗಿದೆ. ನೀನು ಅತ್ಯಧಿಕ ವಾದ ಯಥಾರ್ಥವಂತನು; ನೀತಿವಂತನ ದಾರಿಯನ್ನು ತೂಗಿ ನೋಡುತ್ತೀ;
ನೀನು ಸೌಳಿನಿಂದ ತೊಳಕೊಂಡರೂ ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ ಎಂದು ಕರ್ತನಾದ ದೇವರು ಅನ್ನುತ್ತಾನೆ.
ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.
ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.
ಆಗ ಆತನು ಅವರಿಗೆ--ಮನುಷ್ಯರ ಮುಂದೆ ನೀತಿವಂತರಾಗಿ ಮಾಡಿ ಕೊಳ್ಳುವವರು ನೀವೇ; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾನೆ; ಯಾಕಂದರೆ ಮನುಷ್ಯರಲ್ಲಿ ಯಾವದು ಶ್ರೇಷ್ಠವೆಂದು ಎಣಿಸಲ್ಪ ಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.
ಹಾಗಾದರೆ ನಾವು ಏನು ಹೇಳೋಣ? ನ್ಯಾಯ ಪ್ರಮಾಣವು ಪಾಪವೋ? ಹಾಗೆ ಎಂದಿಗೂ ಅಲ್ಲ; ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ. ಯಾಕಂದರೆ--ನೀನು ಆಶಿಸಬಾರದು ಎಂದು ನ್ಯಾಯಪ್ರಮಾಣವು ಹೇಳ ದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯು ತ್ತಿರಲಿಲ್ಲ.
ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ: ಬೆಂಕಿಯ ಉರಿಯಂತಿರುವ ಕಣ್ಣುಗಳೂ ಶುದ್ಧವಾದ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನು ಹೇಳುವವುಗಳು ಯಾವವೆಂದರೆ,
ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆ ಂಬದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.