ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು.
Cross references
ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
ನಾವು ಈಗ ಇಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ದೃಷ್ಟಿಯಲ್ಲಿ ತೋರುವ ಪ್ರಕಾರ ಮಾಡುವಂತೆ ನೀವು ಮಾಡಬೇಡಿರಿ.
ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು.
ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವದಕ್ಕೆ ತಮಗೆ ಬಾಧ್ಯತೆ ಯನ್ನು ಹುಡುಕುತ್ತಿದ್ದರು. ಯಾಕಂದರೆ ಅಂದಿನ ವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರಕಲಿಲ್ಲ.
ಇಸ್ರಾಯೇಲಿನಲ್ಲಿ ಅರಸನಿಲ್ಲದ ಆ ದಿವಸಗಳಲ್ಲಿ ಆದದ್ದೇನಂದರೆ, ಎಫ್ರಾಯಾಮ್ ಬೆಟ್ಟದ ಪಾರ್ಶ್ವದಲ್ಲಿ ಒಬ್ಬ ಲೇವಿಯನು ಪ್ರವಾ ಸಿಯಾಗಿದ್ದನು.
ಇಸ್ರಾಯೇಲಿನ ದೇವರಾದ ಕರ್ತನೇ ಈಹೊತ್ತು ಇಸ್ರಾಯೇಲಿನಲ್ಲಿ ಒಂದು ಗೋತ್ರ ಕೊರತೆಯಾದ ದ್ದೇನು ಅಂದರು.
ಆ ದಿವಸದಲ್ಲಿ ಇಸ್ರಾ ಯೇಲಿನಲ್ಲಿ ಅರಸನು ಇರಲಿಲ್ಲ; ಒಬ್ಬೊಬ್ಬನು ತನ್ನ ದೃಷ್ಟಿಗೆ ಸರಿಯಾಗಿ ತೋಚಿದ್ದನ್ನು ಮಾಡಿದನು.
ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ.
ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.
ಒಬ್ಬ ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗ ವಿದೆ. ಅದರ ಅಂತ್ಯವು ಮರಣದ ಮಾರ್ಗಗಳೇ.
ಮನುಷ್ಯನ ಮಾರ್ಗಗಳೆಲ್ಲಾ ತನ್ನ ಕಣ್ಣುಗಳ ಮುಂದೆ ಶುದ್ಧವಾಗಿವೆ; ಕರ್ತನು ಆತ್ಮಗಳನ್ನು ತೂಗಿಸುತ್ತಾನೆ.
ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.