Home Bibles ಸಾಮೇತಿಗಳು 16:11 · ಕನ್ನಡ ಬೈಬಲ್
ಸಾಮೇತಿಗಳು 16:11 · ಕನ್ನಡ ಬೈಬಲ್

ನ್ಯಾಯದ ತೂಕವೂ ತಕ್ಕಡಿಯೂ ಕರ್ತನವು; ಚೀಲದ ತೂಕಗಳು ಆತನ ಕೈಕೆಲಸವೇ.

Cross references

ಲೇವ್ಯಕಾಂಡ 19:35

ನ್ಯಾಯವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ಅನ್ಯಾಯ ಮಾಡಬೇಡಿರಿ.

ಲೇವ್ಯಕಾಂಡ 19:36

ನ್ಯಾಯದತ್ರಾಸು, ನ್ಯಾಯದ ಕಲ್ಲುಗಳು, ನ್ಯಾಯದಎಫವು ಮತ್ತು ನ್ಯಾಯದಹೀನ್‌ ನಿಮಗಿರಬೇಕು. ಐಗುಪ್ತದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಕರ್ತನು ನಾನೇ.ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.

ದ್ವಿತೀಯೋಪದೇಶಕಾಂಡ 25:13

ನಿನ್ನ ಚೀಲದಲ್ಲಿ ದೊಡ್ಡದು ಒಂದು, ಸಣ್ಣದು ಒಂದು ಹೀಗೆ ವಿವಿಧ ತೂಕಗಳು ನಿನಗಿರಬಾರದು.

ಸಾಮೇತಿಗಳು 11:1

ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.

ಸಾಮೇತಿಗಳು 20:10

ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ.

ಸಾಮೇತಿಗಳು 20:23

ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ.

ಯೆಹೆಜ್ಕೇಲ 45:10

ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್‌ (ಅಳತೆ) ನಿಮಗಿರಬೇಕು.

ಹೊಶೇಯ 12:7

ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ.

ಆಮೋಸ 8:5

ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಗೋಧಿ ಯನ್ನು ಇಡುವ ಹಾಗೆ ಸಬ್ಬತ್ತು ಯಾವಾಗ ತೀರುವದೆಂದೂ ಎಫವನ್ನು ಚಿಕ್ಕದಾಗಿಯು ಶೆಕೇಲನ್ನು ದೊಡ್ಡದಾಗಿಯು ಕಳ್ಳತ್ರಾಸುಗಳನ್ನು ಮೋಸಕ್ಕಾಗಿ ಮಾಡೋಣವೆಂದೂ

ಮೀಕ 6:11

ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?

Interlinear

Choose Theme