Home Bibles ಸಾಮೇತಿಗಳು 11:1 · ಕನ್ನಡ ಬೈಬಲ್
ಸಾಮೇತಿಗಳು 11:1 · ಕನ್ನಡ ಬೈಬಲ್

ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.

Cross references

ಲೇವ್ಯಕಾಂಡ 19:35

ನ್ಯಾಯವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ಅನ್ಯಾಯ ಮಾಡಬೇಡಿರಿ.

ದ್ವಿತೀಯೋಪದೇಶಕಾಂಡ 25:13

ನಿನ್ನ ಚೀಲದಲ್ಲಿ ದೊಡ್ಡದು ಒಂದು, ಸಣ್ಣದು ಒಂದು ಹೀಗೆ ವಿವಿಧ ತೂಕಗಳು ನಿನಗಿರಬಾರದು.

ದ್ವಿತೀಯೋಪದೇಶಕಾಂಡ 25:16

ಅಂಥವು ಗಳನ್ನು ಮಾಡುವವರೆಲ್ಲರೂ ಅನ್ಯಾಯಮಾಡುವವ ರೆಲ್ಲರೂ ನಿನ್ನ ದೇವರಾದ ಕರ್ತನಿಗೆ ಅಸಹ್ಯ.

ಸಾಮೇತಿಗಳು 16:11

ನ್ಯಾಯದ ತೂಕವೂ ತಕ್ಕಡಿಯೂ ಕರ್ತನವು; ಚೀಲದ ತೂಕಗಳು ಆತನ ಕೈಕೆಲಸವೇ.

ಸಾಮೇತಿಗಳು 20:10

ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ.

ಸಾಮೇತಿಗಳು 20:23

ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ.

ಯೆಹೆಜ್ಕೇಲ 45:10

ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್‌ (ಅಳತೆ) ನಿಮಗಿರಬೇಕು.

ಹೊಶೇಯ 12:7

ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ.

ಹೊಶೇಯ 12:8

ಎಫ್ರಾಯಾಮು--ಆದಾಗ್ಯೂ ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು; ನನ್ನ ಕೆಲಸಗಳಲ್ಲೆಲ್ಲಾ ಪಾಪವಾದ ದುಷ್ಟತ್ವವನ್ನು ಅವರು ನನ್ನಲ್ಲಿ ಕಂಡುಕೊಳ್ಳುವದಿಲ್ಲ.

ಆಮೋಸ 8:5

ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಗೋಧಿ ಯನ್ನು ಇಡುವ ಹಾಗೆ ಸಬ್ಬತ್ತು ಯಾವಾಗ ತೀರುವದೆಂದೂ ಎಫವನ್ನು ಚಿಕ್ಕದಾಗಿಯು ಶೆಕೇಲನ್ನು ದೊಡ್ಡದಾಗಿಯು ಕಳ್ಳತ್ರಾಸುಗಳನ್ನು ಮೋಸಕ್ಕಾಗಿ ಮಾಡೋಣವೆಂದೂ

ಮೀಕ 6:10

ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ?

Interlinear

Choose Theme