Home Bibles ಸಾಮೇತಿಗಳು 13:14 · ಕನ್ನಡ ಬೈಬಲ್
ಸಾಮೇತಿಗಳು 13:14 · ಕನ್ನಡ ಬೈಬಲ್

ಮರಣದ ಪಾಶಗ ಳಿಂದ ತಪ್ಪಿಸಿಕೊಳ್ಳುವದಕ್ಕೆ ಜ್ಞಾನವಂತರ ಕಟ್ಟಳೆಯು ಜೀವದ ಬುಗ್ಗೆಯಾಗಿದೆ.

Cross references

1 ಸಮುವೇಲ 25:33

ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ.

2 ಸಮುವೇಲ 22:6

ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ಉರ್ಲುಗಳು ನನ್ನನ್ನು ಎದುರುಗೊಂಡವು;

ಕೀರ್ತನೆಗಳು 18:5

ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು.

ಕೀರ್ತನೆಗಳು 116:3

ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.

ಸಾಮೇತಿಗಳು 9:11

ನನ್ನ ಮೂಲಕ ನಿನ್ನ ದಿನಗಳು ಹೆಚ್ಚುವವು; ನಿನ್ನ ಜೀವನದ ವರುಷಗಳು ವೃದ್ಧಿಯಾಗುವವು.

ಸಾಮೇತಿಗಳು 10:11

ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ.

ಸಾಮೇತಿಗಳು 14:27

ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ.

ಸಾಮೇತಿಗಳು 15:24

ಕೆಳಗಿನ ಪಾತಾಳವನ್ನು ತಪ್ಪಿಸಿಕೊಳ್ಳುವ ದಕ್ಕಾಗಿ ಜ್ಞಾನಿಗಳಿಗೆ ಜೀವದ ಮಾರ್ಗವು ಎತ್ತರದಲ್ಲಿದೆ.

ಸಾಮೇತಿಗಳು 16:6

ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.

ಸಾಮೇತಿಗಳು 16:17

ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ತೊಲಗುವಂಥದ್ದಾಗಿದೆ. ತನ್ನ ಮಾರ್ಗ ವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ.

ಸಾಮೇತಿಗಳು 16:22

ವಿವೇಕಿಗೆ ವಿವೇಕವೇ ಜೀವದ ಬುಗ್ಗೆ. ಬುದ್ಧಿಹೀನರ ಬೋಧ ನೆಯು ಮೂರ್ಖತನ.

Interlinear

Choose Theme