Home Bibles ಸಾಮೇತಿಗಳು 13 · ಕನ್ನಡ ಬೈಬಲ್ ||

ಸಾಮೇತಿಗಳು

Chapter 13

ಕನ್ನಡ ಬೈಬಲ್
1ಜ್ಞಾನಿಯಾದ ಮಗನು ತನ್ನ ತಂದೆಯ ಬೋಧನೆಯನ್ನು ಕೇಳುತ್ತಾನೆ; ತಿರಸ್ಕರಿಸು ವವನು ಗದರಿಕೆಯನ್ನು ಕೇಳುವದಿಲ್ಲ. 2ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ತಿನ್ನು ವನು; ದೋಷಿಗಳ ಪ್ರಾಣವು ಬಲಾತ್ಕಾರವನ್ನು ತಿನ್ನು ವದು. 3ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು. 4ಸೋಮಾ ರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವ ದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗು ವದು. 5ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು. 6ಯಥಾರ್ಥವಂತನನ್ನು ನೀತಿಯು ತನ್ನ ಮಾರ್ಗ ದಲ್ಲಿ ಕಾಪಾಡುತ್ತದೆ; ಕೆಟ್ಟತನವು ಪಾಪಿಯನ್ನು ಕೆಡವುವದು. 7ತನ್ನನ್ನು ತಾನೇ ಐಶ್ವರ್ಯವಂತನಾಗಿ ಮಾಡಿಕೊಳ್ಳುವವನು ಇದ್ದಾನೆ; ಅವನಿಗೆ ಏನೂ ಇರು ವದಿಲ್ಲ. ತನ್ನನ್ನು ಬಡವನಾಗಿ ಮಾಡಿಕೊಳ್ಳುವವನಿ ದ್ದಾನೆ; ಅವನಿಗೆ ಎಷ್ಟೋ ಐಶ್ವರ್ಯವಿದೆ. 8ಒಬ್ಬನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯವೇ; ಬಡವನು ಗದರಿಕೆಯನ್ನು ಕೇಳುವದಿಲ್ಲ. 9ನೀತಿವಂತರ ಬೆಳಕು ಸಂತೋಷಿಸುತ್ತದೆ; ದುಷ್ಟರ ದೀಪವು ಆರಿ ಹೋಗುವದು. 10ಗರ್ವದಿಂದ ಕಲಹ ಮಾತ್ರ ಬರುತ್ತದೆ; ಒಳ್ಳೆಯ ಸಲಹೆ ಹೊಂದಿದವರಿಗೆ ಜ್ಞಾನವಿದೆ. 11ವ್ಯರ್ಥತ್ವದಿಂದ ಹೊಂದಿದ ಐಶ್ವರ್ಯವು ಕಡಿಮೆ ಯಾಗುವದು; ಪ್ರಯಾಸದಿಂದ ಕೂಡಿಸುವವನು ವೃದ್ಧಿ ಗೊಳ್ಳುವನು. 12ತಡವಾದ ನಿರೀಕ್ಷೆ ಹೃದಯವನ್ನು ಅಸ್ವಸ್ಥತೆ ಮಾಡುತ್ತದೆ; ಆಶೆಯು ಸಫಲವಾದರೆ ಅದು ಜೀವಕರವಾದ ವೃಕ್ಷವು. 13ವಾಕ್ಯವನ್ನು ಉಲ್ಲಂಘಿಸುವ ವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು. 14ಮರಣದ ಪಾಶಗ ಳಿಂದ ತಪ್ಪಿಸಿಕೊಳ್ಳುವದಕ್ಕೆ ಜ್ಞಾನವಂತರ ಕಟ್ಟಳೆಯು ಜೀವದ ಬುಗ್ಗೆಯಾಗಿದೆ. 15ಸುವಿವೇಕವು ದಯಾ ಸ್ಪದವು; ದೋಷಕರ ಮಾರ್ಗವು ಕಠಿಣವಾಗಿದೆ. 16ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಅವಿವೇಕಿಯು ತನ್ನ ಮೂಢತ್ವವನ್ನು ಹೊರಗೆಡವು ತ್ತಾನೆ. 17ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ. 18ಬೋಧನೆಯನ್ನು ತಿರಸ್ಕರಿಸುವವನಿಗೆ ಬಡತನವೂ ಅವಮಾನವೂ ಬರುವವು.; ಗದರಿಕೆಯನ್ನು ಗಮನಿಸು ವವನು ಸನ್ಮಾನಹೊಂದುವನು. 19ಇಷ್ಟ ಸಿದ್ಧಿ ಪ್ರಾಣಕ್ಕೆ ಸಿಹಿಯಾಗಿದೆ; ಕೆಟ್ಟತನದಿಂದ ತೊಲಗುವದು ಅವಿವೇಕಿಗಳಿಗೆ ಅಸಹ್ಯವಾಗಿದೆ. 20ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗಿರುವನು. ಬುದ್ಧಿ ಹೀನರ ಜೊತೆಗಾರನು ನಾಶವಾಗುವನು. 21ದುಷ್ಟತ್ವವು ಪಾಪಿಗಳನ್ನು ಹಿಂದಟ್ಟುತ್ತದೆ; ನೀತಿ ವಂತರಿಗೆ ಒಳ್ಳೇದು ಪ್ರತಿಫಲವಾಗುವದು. 22ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು; ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ. 23ಬಡವರಿಗೆ ಭೂಮಿಯ ಸಾಗುವಳಿಯಲ್ಲಿ ಬಹಳ ಆಹಾರವು ಸಿಕ್ಕುತ್ತದೆ; ನ್ಯಾಯ ತೀರ್ಪಿನ ಕೊರತೆಯಿಂದ ಹಾಳಾಗುವದು ಉಂಟು. 24ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ; ಮುಂಚಿತವಾಗಿ ಶಿಕ್ಷಿಸುವವನು ಅವನನ್ನು ಪ್ರೀತಿಸುತ್ತಾನೆ.ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು. 25ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.

Choose Theme