Home Bibles ಸಾಮೇತಿಗಳು 12:26 · ಕನ್ನಡ ಬೈಬಲ್
ಸಾಮೇತಿಗಳು 12:26 · ಕನ್ನಡ ಬೈಬಲ್

ನೀತಿ ವಂತನು ತನ್ನ ನೆರೆಯವನಿಗಿಂತ ಶ್ರೇಷ್ಠನಾಗಿದ್ದಾನೆ; ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆ ಯುತ್ತದೆ.

Cross references

ಕೀರ್ತನೆಗಳು 16:3

ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.

ಕೀರ್ತನೆಗಳು 18:12

ಆತನ ಮುಂದಿದ್ದ ಪ್ರಕಾಶದಿಂದ ಆತನ ಮಂದವಾದ ಮೋಡಗಳೂ ಕಲ್ಮಳೆಗಳೂ ಉರಿಗೆಂಡ ಗಳೂ ಹಾದು ಹೋದವು.

ಸಾಮೇತಿಗಳು 12:13

ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು.

ಸಾಮೇತಿಗಳು 14:22

ಕೆಟ್ಟದ್ದನ್ನು ಕಲ್ಪಿಸುವವರು ತಪ್ಪು ಮಾಡುತ್ತಾರಲ್ಲವೇ? ಒಳ್ಳೆಯದನ್ನು ಕಲ್ಪಿಸುವವರಿಗೆ ಕರುಣೆಯೂ ಸತ್ಯವೂ ಇರುವವು.

ಸಾಮೇತಿಗಳು 17:27

ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.

ಮತ್ತಾಯ 5:46

ನಿಮ್ಮನ್ನು ಪ್ರೀತಿಮಾಡುವವರನ್ನೇ ನೀವು ಪ್ರೀತಿಮಾಡಿದರೆ ನಿಮಗೆ ಯಾವ ಪ್ರತಿಫಲ ಸಿಕ್ಕೀತು? ಸುಂಕದವರೂ ಹಾಗೆ ಮಾಡುತ್ತಾರಲ್ಲವೇ?

ಲೂಕ 6:32

ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ.

ಯಾಕೋಬ 1:13

ಯಾವನಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ--ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಯಾಕಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರನು; ಆತನು ಯಾರನ್ನೂ ಶೋಧಿಸುವದೂ ಇಲ್ಲ.

1 ಪೇತ್ರ 2:18

ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಭಯದಿಂದ ಅಧೀನ ರಾಗಿರ್ರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯ ರಾಗಿರ್ರಿ.

2 ಪೇತ್ರ 2:18

ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

1 ಯೋಹಾನ 2:26

ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವು ಗಳನ್ನು ನಾನು ನಿಮಗೆ ಬರೆದಿದ್ದೇನೆ.

ಪ್ರಕಟನೆ 12:9

ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.

ಪ್ರಕಟನೆ 13:14

ಮೃಗದ ಮುಂದೆ ಇಂಥಾ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರ ವನ್ನು ಹೊಂದಿ ಭೂಮಿಯ ಮೇಲೆ ವಾಸಿಸುವ ಜನರನ್ನು ಮೋಸಗೊಳಿಸುವದಲ್ಲದೆ ಕತ್ತಿಯಿಂದ ಗಾಯಹೊಂದಿ ಬದುಕಿದ ಮೃಗಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳ ಬೇಕೆಂದು ಅವರಿಗೆ ಹೇಳುತ್ತದೆ.

Interlinear

Choose Theme