ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
Cross references
ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.
ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು.
ನೀತಿವಂತರ ಹೃದಯವು ಉತ್ತರಕೊಡುವದಕ್ಕೆ ಅಭ್ಯಾಸಿಸುತ್ತದೆ; ದುಷ್ಟರ ಬಾಯಿ ಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.
ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ.ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
ಆದದರಿಂದ ನನ್ನ ಪ್ರಿಯ ಸಹೋದರರೇ, ಪ್ರತಿ ಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತನಾಡುವದರಲ್ಲಿ ಮತ್ತು ಕೋಪಿಸುವದರಲ್ಲಿ ನಿಧಾನವಾಗಿಯೂ ಇರಲಿ.
ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.
ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.