ಕೃಪೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಕಾಪಾಡಿಕೊಳ್ಳುತ್ತಾಳೆ. ಬಲಿಷ್ಠರು ಐಶ್ವರ್ಯವನ್ನು ಕಾಪಾಡಿಕೊಳ್ಳುತ್ತಾರೆ.
Cross references
ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ.
ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ--ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನೆಂದು ಹೇಳಿದರು.
ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ--ಕೇಳಿರಿ, ಕೇಳಿರಿ, ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸವಿಾಪಿ ಸಲು ಬರಹೇಳಿರಿ ಎಂದು ಕೂಗಿ ಬೇಡಿಕೊಂಡಳು.
ಎಸ್ತೇರಳು ಅರಸನ ಮುಂದೆ ಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವ ಹಾಗೆಯೂ ಅವನೂ ಅವನ ಮಕ್ಕಳೂ ಗಲ್ಲಿಗೆ ಹಾಕಲ್ಪಡುವ ಹಾಗೆಯೂ ಅರಸನು ಪತ್ರ ಗಳಿಂದ ಆಜ್ಞಾಪಿಸಿದನು;
ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
ಅಷ್ಡೋದಿನ ಅರಮನೆಗಳಲ್ಲಿ ಐಗುಪ್ತದೇಶದ ಅರಮನೆಗಳಲ್ಲಿ ಹೀಗೆ ಸಾರಿ ಹೇಳಿರಿ--ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ ಅದರ ಮಧ್ಯ ದಲ್ಲಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.
ತಮ್ಮ ಅರಮನೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರು ನ್ಯಾಯವಾದ ದ್ದನ್ನು ಮಾಡುವದಕ್ಕೆ ಅವರಿಗೆ ತಿಳಿಯುವದಿಲ್ಲ ಎಂದು ಕರ್ತನು ಹೇಳುತ್ತಾನೆ.
ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಲೋಕದಲ್ಲೆಲ್ಲಾ ಎಲ್ಲೆಲ್ಲಿ ಈ ಸುವಾರ್ತೆಯು ಸಾರಲ್ಪಡುವದೋ ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲ್ಪಡುವದು ಅಂದನು.
ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ ಯೋಹಾನಳೂ ಸುಸನ್ನಳೂ ಮತ್ತು ಬೇರೆ ಅನೇಕರು ತಮ್ಮ ಸೊತ್ತಿನಿಂದ ಆತನನ್ನು ಉಪಚರಿ ಸಿದವರು ಆತನೊಂದಿಗೆ ಇದ್ದರು.
ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು.
ಆಯುಧ ಗಳನ್ನು ಧರಿಸಿಕೊಂಡು ಬಲಿಷ್ಠನಾದವನೊಬ್ಬನು ತನ್ನ ಅರಮನೆಯನ್ನು ಕಾಯುವದಾದರೆ ಅವನ ಸೊತ್ತು ಸುರಕ್ಷಿತವಾಗಿರುವದು.
ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
ಪೇತ್ರನು ಎದು ಅವರ ಜೊತೆಯಲ್ಲಿ ಹೋದನು. ಅವನು ಬಂದಾಗ ಅವರು ಅವನನ್ನು ಮೇಲಂತಸ್ತಿನ ಕೊಠಡಿಗೆ ಕರೆದು ಕೊಂಡುಹೋದರು. ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಮೇಲಂಗಿಗಳನ್ನೂ ಒಳಂಗಿಗಳನ್ನೂ ತೋರಿಸಿ
ದೇವರನ್ನು ಆರಾಧಿಸು ತ್ತಿದ್ದವಳೂ ಥುವತೈರ ಪಟ್ಟಣದವಳೂ ಧೂಮ್ರ ವರ್ಣದ ವಸ್ತ್ರಗಳನ್ನು ಮಾರುತ್ತಿದ್ದವಳೂ ಆದ ಲುದ್ಯ ಳೆಂಬ ಹೆಸರುಳ್ಳ ಒಬ್ಬ ಸ್ತ್ರೀಯು ನಮ್ಮ ಮಾತುಗಳನ್ನು ಕೇಳುತ್ತಿದ್ದಳು. ಕರ್ತನು ಆಕೆಯ ಹೃದಯವನ್ನು ತೆರದ ದ್ದರಿಂದ ಪೌಲನು ಹೇಳಿದ ಮಾತುಗಳಿಗೆ ಆಕೆಯು ಲ
ನೀವು ಆಕೆಯನ್ನು ಪರಿಶುದ್ಧರಿಗೆ ತಕ್ಕಂತೆ ಕರ್ತನಲ್ಲಿ ಅಂಗೀಕರಿಸಿ ಆಕೆಯ ಕೆಲಸದಲ್ಲಿ ಆಕೆಗೆ ಅವಶ್ಯವಾದ ಸಹಾಯವನ್ನು ಮಾಡಿರಿ; ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳಾಗಿದ್ದಾಳೆ.
ನಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.
ಆಯಲ್ಪಟ್ಟವಳಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಹಿರಿಯನಾದ--ಸತ್ಯದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ; ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.