Home Bibles ಎಸ್ತೇರ್ 9:25 · ಕನ್ನಡ ಬೈಬಲ್
ಎಸ್ತೇರ್ 9:25 · ಕನ್ನಡ ಬೈಬಲ್

ಎಸ್ತೇರಳು ಅರಸನ ಮುಂದೆ ಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವ ಹಾಗೆಯೂ ಅವನೂ ಅವನ ಮಕ್ಕಳೂ ಗಲ್ಲಿಗೆ ಹಾಕಲ್ಪಡುವ ಹಾಗೆಯೂ ಅರಸನು ಪತ್ರ ಗಳಿಂದ ಆಜ್ಞಾಪಿಸಿದನು;

Cross references

1 ಸಮುವೇಲ 25:39

ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು.

1 ಅರಸುಗಳು 8:32

ಆಗ ನೀನು ದುಷ್ಟನನ್ನು ದುಷ್ಟನಾಗಮಾಡಿ ಅವನ ಮಾರ್ಗದ ಪ್ರಕಾರ ಅವನ ತಲೆಯ ಮೇಲೆ ಬರಮಾಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ಪರಲೋಕದಲ್ಲಿರುವ ನೀನು ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.

ಎಸ್ತೇರ್ 7:5

ಆಗ ಅರಸ ನಾದ ಅಹಷ್ವೇರೋಷನು--ರಾಣಿಯಾದ ಎಸ್ತೇರಳಿಗೆ ಪ್ರತ್ಯುತ್ತರವಾಗಿ ಈ ಪ್ರಕಾರ ಮಾಡಲು ತನ್ನ ಹೃದಯ ತುಂಬಿಕೊಂಡವನು ಯಾರು? ಅವನು ಎಲ್ಲಿ ಅಂದನು.

ಎಸ್ತೇರ್ 7:10

ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.

ಎಸ್ತೇರ್ 9:13

ಅದಕ್ಕೆ ಎಸ್ತೇರಳು--ಅರಸನಿಗೆ ಸಮ್ಮತಿಯಾದರೆ ಇಂದಿನ ಆಜ್ಞೆಯ ಪ್ರಕಾರ ನಾಳಿನ ದಿವಸವೂ ಶೂಷನಿನಲ್ಲಿ ಮಾಡಲು ಯೆಹೂದ್ಯರಿಗೆ ಅಪ್ಪಣೆ ಆಗಲಿ; ಮತ್ತು ಹಾಮಾನನ ಹತ್ತು ಮಂದಿ ಮಕ್ಕಳು ಗಲ್ಲಿಗೆ ಹಾಕಲ್ಪಡಲಿ ಅಂದಳು.

ಕೀರ್ತನೆಗಳು 7:16

ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು;ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.

ಕೀರ್ತನೆಗಳು 7:17

ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.

ಕೀರ್ತನೆಗಳು 94:23

ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.

ಕೀರ್ತನೆಗಳು 109:17

ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.

ಕೀರ್ತನೆಗಳು 140:9

ನನ್ನ ಸುತ್ತಲಿರುವವರ ವಿಷವೂ ಅವರ ತುಟಿಗಳ ಕಾಟವೂ ಅವರನ್ನು ಮುಚ್ಚಲಿ.

ಕೀರ್ತನೆಗಳು 141:10

ನಾನು ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿ ಬೀಳಲಿ.

ಸಾಮೇತಿಗಳು 5:22

ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.

ಸಾಮೇತಿಗಳು 26:27

ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.

ಒಬದ್ಯ 1:15

ಕರ್ತನ ದಿನವು ಎಲ್ಲಾ ಜನಾಂಗಗಳ ಮೇಲೆ ಸವಿಾಪವಾಗಿದೆ; ನೀನು ಮಾಡಿದ ಹಾಗೆಯೇ ನಿನಗೆ ಮಾಡಲ್ಪಡುವದು; ನಿನ್ನ ಪ್ರತಿಫಲವು ನಿನ್ನ ತಲೆಯ ಮೇಲೆ ತಿರುಗುವದು.

ಮತ್ತಾಯ 21:44

ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದು ಯಾವನ ಮೇಲೆ ಬೀಳುವದೋ ಅವನನ್ನು ಅರೆದು ಪುಡಿಪುಡಿ ಮಾಡುವದು ಅಂದನು.

Interlinear

Choose Theme