Home Bibles ಸಾಮೇತಿಗಳು 10 · ಕನ್ನಡ ಬೈಬಲ್ ||

ಸಾಮೇತಿಗಳು

Chapter 10

ಕನ್ನಡ ಬೈಬಲ್
1ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ. 2ಕೆಟ್ಟತನದ ಸಂಪತ್ತುಗಳು ಪ್ರಯೋಜನವಿಲ್ಲ; ನೀತಿಯು ಮರಣದಿಂದ ಬಿಡಿಸುತ್ತದೆ. 3ನೀತಿವಂತನ ಪ್ರಾಣವನ್ನು ಕರ್ತನು ಹಸಿವೆಗೊಳಿಸನು; ದುಷ್ಟರ ಆಸ್ತಿಯನ್ನು ಆತನು ತಳ್ಳಿಹಾಕುತ್ತಾನೆ. 4ಬಿಗಿ ಇಲ್ಲದ ಕೈಯಿಂದ ವ್ಯಾಪಾರ ಮಾಡುವವನು ದರಿದ್ರನಾಗು ವನು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ. 5ಬೇಸಿಗೆಯಲ್ಲಿ ಕೂಡಿಸುವವನು ಬುದ್ಧಿ ವಂತನಾದ ಮಗನು ಸುಗ್ಗಿಯಲ್ಲಿ ನಿದ್ರೆಮಾಡುವವನು ನಾಚಿಕೆಪಡಿಸುವ ಮಗನು. 6ನೀತಿವಂತರ ತಲೆಯ ಮೇಲೆ ಆಶೀರ್ವಾದಗಳು ಇವೆ; ಆದರೆ ದುಷ್ಟನ ಬಾಯಿಯನ್ನು ಬಲಾತ್ಕಾರವು ಮುಚ್ಚುತ್ತದೆ. 7ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ. 8ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು. ಹರಟೆಯ ಮೂರ್ಖನು ಬೀಳುವನು. 9ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡು ತ್ತಿರುವವನು ಬಯಲಿಗೆ ಬರುವನು. 10ಕಣ್ಣು ಮಿಟಕಿ ಸುವವನು ದುಃಖವನ್ನುಂಟುಮಾಡುತ್ತಾನೆ; ಹರಟೆಯ ಮೂರ್ಖನು ಬೀಳುವನು. 11ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ. 12ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ; ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚು ತ್ತದೆ. 13ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕು ತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ. 14ಜ್ಞಾನಿ ಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ನಾಶನಕ್ಕೆ ಸವಿಾಪವಾಗಿದೆ. 15ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ. 16ನೀತಿವಂತರ ಪ್ರಯಾಸವು ಜೀವಕ್ಕಾಗಿಯೂ ದುಷ್ಟರ ಫಲವು ಪಾಪಕ್ಕಾಗಿಯೂ ಇವೆ. 17ಶಿಕ್ಷಣವನ್ನು ಕೈಕೊಳ್ಳುವವನು ಜೀವನದ ಮಾರ್ಗದಲ್ಲಿ ಇದ್ದಾನೆ; ಗದರಿಕೆಯನ್ನು ತಿರಸ್ಕರಿಸುವವನು ತಪ್ಪುಮಾಡುತ್ತಾನೆ. 18ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು. 19ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು. 20ನೀತಿ ವಂತರ ನಾಲಿಗೆಯು ಚೊಕ್ಕ ಬೆಳ್ಳಿಯಂತಿದೆ; ದುಷ್ಟರ ಹೃದಯವು ಅಲ್ಪವಾದದ್ದು. 21ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ. ಜ್ಞಾನದ ಕೊರತೆಯಿಂದ ಅವಿವೇಕಿಗಳು ಸಾಯುತ್ತಾರೆ. 22ಕರ್ತನ ಆರ್ಶೀ ವಾದವು ಐಶ್ವರ್ಯವನ್ನುಂಟು ಮಾಡುವದು. ಅದ ರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವ ದಿಲ್ಲ. 23ಬುದ್ಧಿಹೀನನಿಗೆ ಕೇಡು ಮಾಡುವದು ಹಾಸ್ಯಾ ಸ್ಪದವಾಗಿದೆ; ಆದರೆ ಗ್ರಹಿಸುವವನಿಗೆ ಜ್ಞಾನವಿದೆ. 24ದುಷ್ಟನ ಭಯವು ಅವನ ಮೇಲೆ ಬರುವದು; ನೀತಿವಂತರ ಇಷ್ಟವು ಸಫಲವಾಗುವದು. 25ಹೇಗೆ ಬಿರುಗಾಳಿಯು ಬೀಸುವದೋ ಹಾಗೆಯೇ ದುಷ್ಟರು ಇಲ್ಲವಾಗುವರು. ನೀತಿವಂತನು ಶಾಶ್ವತವಾದ ಅಸ್ತಿವಾರ ವಾಗಿದ್ದಾನೆ. 26ಹಲ್ಲುಗಳಿಗೆ ಹುಳಿಯೂ ಕಣ್ಣುಗಳಿಗೆ ಹೊಗೆಯೂ ಹೇಗೋ ಹಾಗೆಯೇ ತನ್ನನ್ನು ಕಳುಹಿಸು ವವರಿಗೆ ಸೋಮಾರಿಯೂ ಇರುವನು. 27ಕರ್ತನ ಭಯವು ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರುಷ ಗಳು ಕಡಿಮೆ ಮಾಡಲ್ಪಡುವವು. 28ನೀತಿವಂತರ ನಿರೀ ಕ್ಷೆಯು ಆನಂದಕರವಾಗಿರುವದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವದು. 29ಯಥಾರ್ಥವಂತರಿಗೆ ಕರ್ತನ ಮಾರ್ಗವು ಬಲವಾಗಿದೆ; ಅಕ್ರಮ ಮಾಡುವ ವರಿಗೆ ಅದು ನಾಶನವಾಗಿರುವದು. 30ನೀತಿವಂತರು ಎಂದಿಗೂ ಕದಲುವದೇ ಇಲ್ಲ; ದುಷ್ಟರು ಭೂಮಿಯಲ್ಲಿ ವಾಸಮಾಡುವದಿಲ್ಲ. 31ನೀತಿವಂತರ ಬಾಯಿಯು ಜ್ಞಾನವನ್ನು ಫಲಿಸುತ್ತದೆ; ಮೂರ್ಖನ ನಾಲಿಗೆಯು ಕತ್ತರಿಸಲ್ಪಡುವದು.ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ. 32ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ.

Choose Theme