ಯೇಸು ಕ್ರಿಸ್ತನಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿ ಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ.
Cross references
ಆದದರಿಂದ ಮೋವಾಬಿನ ನಿಮಿತ್ತ ನನ್ನ ಕರುಳುಗಳು ಮತ್ತು ಕೀರ್ ಹರೇಷೆಥಿನ ನಿಮಿತ್ತ ನನ್ನ ಅಂತರಿಂದ್ರಿಯಗಳು ಕಿನ್ನರಿಯಂತೆ ಸ್ವರಗೈಯುವವು.
ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ?
ನೀನು ಈ ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ.
ನಮ್ಮ ದೇವರ ಮಮತೆಯ ಕರುಣೆಯಿಂದ ಅದು ಆಗುವದ ಲ್ಲದೆ ಮೇಲಣದಿಂದ ಅರುಣೋದಯವು ಉಂಟಾಗಿ ನಮ್ಮನ್ನು ಸಂಧಿಸಿ
ನಾನು ಯಾವಾಗಲೂ ಪ್ರಾರ್ಥನೆಗಳಲ್ಲಿ ಎಡೆಬಿಡದೆ ನಿಮ್ಮನ್ನು ಜ್ಞಾಪಕ ಮಾಡಿ ಕೊಳ್ಳುತ್ತೇನೆ. ನಾನು ಯಾವಾತನ ಮಗನ ಸುವಾರ್ತೆ ಯಲ್ಲಿ ನನ್ನ ಆತ್ಮದೊಂದಿಗೆ ಸೇವಿಸುತ್ತೇನೋ ಆ ದೇವರೇ ಇದಕ್ಕೆ ನನ್ನ ಸಾಕ್ಷಿ.
ಈ ಮಾತನ್ನು ನಾನು ಸುಳ್ಳಾಡದೆ ಕ್ರಿಸ್ತನಲ್ಲಿ ಸತ್ಯವಾಗಿ ಹೇಳುತ್ತೇನೆ; ಪವಿ ತ್ರಾತ್ಮನಲ್ಲಿ ನನ್ನ ಮನಸ್ಸಾಕ್ಷಿಯು ನನಗೆ ಸಾಕ್ಷಿ ಕೊಡುತ್ತದೆ.
ನಿಮ್ಮ ಮೇಲಿರುವ ನಮ್ಮ ಪ್ರೀತಿಯು ಸಂಕೋಚವಾದದ್ದಲ್ಲ, ನಮ್ಮ ವಿಷಯದಲ್ಲಿ ನಿಮ್ಮ ಪ್ರೀತಿಯೇ ಸಂಕೋಚ ವಾದದ್ದು.
ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.ಸರ್ವವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷಪಡುತ್ತೇನೆ.
ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ. ಇದಲ್ಲದೆ ನೀವು ಪರಿ ಪೂರ್ಣತೆಗೆ ಬರಬೇಕೆಂಬದೇ ನಮ್ಮ ಇಷ್ಟ.
ಈಗ ನಾನು ನಿಮಗೆ ಬರೆಯುವವುಗಳ ವಿಷಯ ದಲ್ಲಿ ಇಗೋ, ದೇವರ ಮುಂದೆ ನಾನು ಸುಳ್ಳಾಡು ವದಿಲ್ಲ.
ನನ್ನ ಚಿಕ್ಕ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ತಿರಿಗಿ ಪ್ರಸವ ವೇದನೆಪಡುತ್ತೇನೆ.
ಕ್ರಿಸ್ತನಲ್ಲಿ ಆದರಣೆ, ಪ್ರೀತಿಯ ಸಂತೈಸುವಿಕೆ, ಆತ್ಮನ ಅನ್ಯೋನ್ಯತೆ, ದಯಾ ವಾತ್ಸಲ್ಯಗಳು ಇರುವದಾದರೆ
ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು, ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ತುಂಬಾ ವ್ಯಸನಪಟ್ಟನು.