ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ?
Cross references
ಆಕಾಶದೊಳಗಿಂದ, ನಿನ್ನ ಪರಿಶುದ್ಧ ನಿವಾಸದೊ ಳಗಿಂದ ಕಣ್ಣಿಡು; ನಿನ್ನ ಜನರಾದ ಇಸ್ರಾಯೇಲನ್ನೂ ನೀನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ಪ್ರಕಾರ ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ದೇಶವಾಗಿರುವಂಥ ದೇಶವನ್ನೂ ಆಶೀರ್ವದಿಸು ಎಂದು ಹೇಳಬೇಕು.
ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?
ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.
ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
ತನ್ನ ನಿವಾಸಸ್ಥಳದಿಂದ ಭೂನಿವಾ ಸಿಗಳೆಲ್ಲರ ಮೇಲೆ ಕಣ್ಣಿಡುತ್ತಾನೆ.
ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ?
ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ
ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು.
ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ?
ಜನಾಂಗಗಳೂ ರಾಜ್ಯಗಳೂ ಕರ್ತ ನನ್ನು ಸೇವಿಸುವದಕ್ಕೆ ಒಟ್ಟಾಗಿ ಕೂಡಿ ಬರುವಾಗ
ನಮ್ಮ ದೇವರಾದ ಕರ್ತನ ಹಾಗೆ ಯಾರಿದ್ದಾರೆ? ಉನ್ನತದಲ್ಲಿ ಆತನು ವಾಸಿಸುತ್ತಾನೆ.
ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.
ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.