Home Bibles ಅಂಕೆಗಳ ಪುಸ್ತಕ 7:13 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 7:13 · ಕನ್ನಡ ಬೈಬಲ್

ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್‌ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.

Cross references

ನಿರ್ಗಮಕಾಂಡ 25:29

ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು.

ನಿರ್ಗಮಕಾಂಡ 30:13

ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್‌ ಕೊಡಬೇಕು. ಅರೆ ಶೆಕೆಲ್‌ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

ನಿರ್ಗಮಕಾಂಡ 37:16

ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.

ಲೇವ್ಯಕಾಂಡ 2:1

ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.

ಲೇವ್ಯಕಾಂಡ 27:3

ನೀನು ನೇಮಿಸಬೇಕಾದ ಕ್ರಯವು ಯಾವದಂದರೆ--ಇಪ್ಪತ್ತು ವರುಷದವನು ಮೊದಲುಗೊಂಡು ಅರವತ್ತು ವರುಷ ದವನ ವರೆಗೆ ನೀನು ನೇಮಿಸುವ ಕ್ರಯವು ಪರಿಶುದ್ಧ ಶೇಕೆಲಿನ ಮೇರೆಗೆ ಐವತ್ತು ಬೆಳ್ಳಿಯ ಶೇಕೆಲುಗಳಾಗಿರ ಬೇಕು.

ಲೇವ್ಯಕಾಂಡ 27:25

ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.

ಅಂಕೆಗಳ ಪುಸ್ತಕ 3:47

ಒಬ್ಬೊಬ್ಬ ನಿಗೆ ಐದು ಶೇಕೆಲುಗಳನ್ನು ತೆಗೆದುಕೋ. ಪರಿಶುದ್ಧ ಶೇಕೆಲಿನ ಮೇರೆಗೆ (ಶೇಕೆಲಿಗೆ ಇಪ್ಪತ್ತು ಗೇರಾ) ಈ ಪ್ರಕಾರವಾಗಿ ತೆಗೆದುಕೊಳ್ಳಬೇಕು.

ಅಂಕೆಗಳ ಪುಸ್ತಕ 7:73

ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು.

ಅಂಕೆಗಳ ಪುಸ್ತಕ 15:4

ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು

ಅಂಕೆಗಳ ಪುಸ್ತಕ 28:5

ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.

ಅಂಕೆಗಳ ಪುಸ್ತಕ 29:6

ಇದಲ್ಲದೆ ತಿಂಗಳಿನ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ನಿತ್ಯವಾದ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ಬೆಂಕಿಯಿಂದ ಮಾಡ ಲ್ಪಟ್ಟು ಕರ್ತನಿಗೆ ಸುವಾಸನೆಗಾಗಿ ಅವುಗಳಿಗೆ ತಕ್ಕಂತೆ ಅರ್ಪಿಸಬೇಕು.

1 ಅರಸುಗಳು 7:43

ಹತ್ತು ಆಧಾರಗಳೂ ಆಧಾ ರಗಳ ಮೇಲಿರುವ ಹತ್ತು ತೊಟ್ಟಿಗಳೂ

1 ಅರಸುಗಳು 7:45

ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನಿಗೆ ಮಾಡಿದ ಈ ಸಾಮಾನುಗಳೆಲ್ಲಾ ಹೊಳೆಯುವ ತಾಮ್ರದವುಗಳಾಗಿದ್ದವು.

2 ಅರಸುಗಳು 25:14

ಮಡಕೆಗಳನ್ನೂ ಸಲಿಕೆ ಗಳನ್ನೂ ಕತ್ತರಿಗಳನ್ನೂ ಸೌಟುಗಳನ್ನೂ ಅವರು ಸೇವಿಸುತ್ತಿದ್ದ ಎಲ್ಲಾ ಹಿತ್ತಾಳೆಯ ಸಾಮಾನುಗಳನ್ನೂ ತಕ್ಕೊಂಡು ಹೋದರು.

ಎಜ್ರಾ 1:9

ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು,

ಎಜ್ರಾ 8:25

ಅರಸನೂ ಅವನ ಸಲಹೆಗಾರರೂ ಅವನ ಪ್ರಧಾನರೂ ಅಲ್ಲಿದ್ದ ಎಲ್ಲಾ ಇಸ್ರಾಯೇಲ್ಯರೂ ನಮ್ಮ ದೇವರ ಆಲಯಕ್ಕೆ ಅರ್ಪಿಸಿದ ಕಾಣಿಕೆಯಾದ ಬೆಳ್ಳಿಯನ್ನೂ ಬಂಗಾರವನ್ನೂ ಸಾಮಾನುಗಳನ್ನೂ ಅವರಿಗೆ ತೂಗಿ ಕೊಟ್ಟೆನು.

ದಾನಿಯೇಲ 5:2

ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.

ಜೆಕರ್ಯ 14:20

ಆ ದಿನದಲ್ಲಿ ಕುದುರೆಗಳ ಗೆಜ್ಜೆಗಳ ಮೇಲೆ ಕರ್ತನಿಗೆ ಪರಿಶುದ್ಧವು ಎಂದಿರುವದು; ಕರ್ತನ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವವು.ಹೌದು, ಯೆರೂಸಲೇಮಿ ನಲ್ಲಿಯೂ ಯೆಹೂದದಲ್ಲಿಯೂ ಇರುವ ಪ್ರತಿ ಯೊಂದು ಪಾತ್ರೆಯು ಸೈನ್ಯಗಳ ಕರ್ತನಿಗೆ ಪರಿಶುದ್ಧ ವಾಗಿರುವವು; ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳಲ್ಲಿ ತಕ್ಕೊಂಡು ಬೇಯಿಸುವರು; ಆ ದಿನದಲ್ಲಿ ಕಾನಾನ್ಯನು ಸೈನ್ಯಗಳ ಕರ್ತನ ಆಲಯದಲ್ಲಿ ಇನ್ನು ಮೇಲೆ ಇರುವದೇ ಇಲ್ಲ.

ಮತ್ತಾಯ 14:8

ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.

ಮತ್ತಾಯ 14:11

ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.

Interlinear

Choose Theme