ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.
Cross references
ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್ ಕೊಡಬೇಕು. ಅರೆ ಶೆಕೆಲ್ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.
ಯಾವನಾದರೂ ಅತಿಕ್ರಮಿಸಿ ಕರ್ತನ ಪರಿಶುದ್ಧ ವಾದವುಗಳನ್ನು ಅರಿಯದೆ ಪಾಪಮಾಡಿದ್ದರೆ ಅವನು ತನ್ನ ಅತಿಕ್ರಮಕ್ಕಾಗಿ ತನ್ನ ಹಿಂಡುಗಳಿಂದ ದೋಷವಿಲ್ಲದ ಟಗರನ್ನು ನಿನ್ನ ಅಂದಾಜಿನ ಪ್ರಕಾರ ಪವಿತ್ರ ಸ್ಥಳದ ಶೆಕೆಲುಗಳಿಗನುಸಾರವಾಗಿ ಬೆಳ್ಳಿಯ ಶೆಕೆಲುಗಳನ್ನು ಅತಿ ಕ್ರಮದ ಬಲಿಗಾಗಿ ಕರ್ತನಿಗೆ ತರಬೇಕು.
ನೀನು ನೇಮಿಸಬೇಕಾದ ಕ್ರಯವು ಯಾವದಂದರೆ--ಇಪ್ಪತ್ತು ವರುಷದವನು ಮೊದಲುಗೊಂಡು ಅರವತ್ತು ವರುಷ ದವನ ವರೆಗೆ ನೀನು ನೇಮಿಸುವ ಕ್ರಯವು ಪರಿಶುದ್ಧ ಶೇಕೆಲಿನ ಮೇರೆಗೆ ಐವತ್ತು ಬೆಳ್ಳಿಯ ಶೇಕೆಲುಗಳಾಗಿರ ಬೇಕು.
ಒಬ್ಬೊಬ್ಬ ನಿಗೆ ಐದು ಶೇಕೆಲುಗಳನ್ನು ತೆಗೆದುಕೋ. ಪರಿಶುದ್ಧ ಶೇಕೆಲಿನ ಮೇರೆಗೆ (ಶೇಕೆಲಿಗೆ ಇಪ್ಪತ್ತು ಗೇರಾ) ಈ ಪ್ರಕಾರವಾಗಿ ತೆಗೆದುಕೊಳ್ಳಬೇಕು.
ಬಿಡಿಸತಕ್ಕವುಗಳನ್ನು ಒಂದು ತಿಂಗಳಿನ ಪ್ರಾಯ ದಿಂದ ಇಪ್ಪತ್ತು ಗೇರಗಳು ಅಂದರೆ ಪರಿಶುದ್ಧ ಶೇಕೆಲಿನ ಮೇರೆಗೆ ನಿನ್ನ ಎಣಿಕೆಯಲ್ಲಿ ಐದು ಶೇಕೆಲುಗಳ ಬೆಳ್ಳಿ ಯಿಂದ ವಿಮೋಚಿಸಿಕೊಳ್ಳಬೇಕು.
ಶೇಕೆಲ್ ಇಪ್ಪತ್ತು ಗೇರಾ ಆಗಿರಬೇಕು. ನಿಮ್ಮ ಮಾನೆಯು ಇಪ್ಪತ್ತು ಶೇಕೆಲು ಇಪ್ಪತ್ತೈದು ಶೇಕೆಲು ಮತ್ತು ಹದಿನೈದು ಶೇಕೆಲು ಆಗಿರಬೇಕು.