ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ.
Cross references
ಆಗ ಅವನು ತನ್ನ ಕಣ್ಣು ಗಳನ್ನೆತ್ತಿ ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾವಿಾನನನ್ನು ನೋಡಿ--ನೀವು ನನಗೆ ಹೇಳಿದ ನಿಮ್ಮ ತಮ್ಮನು ಇವನೋ ಎಂದು ಹೇಳಿ ಅವನು--ನನ್ನ ಮಗನೇ, ದೇವರು ನಿನಗೆ ಕೃಪಾಳು ವಾಗಿರಲಿ ಅಂದನು.
ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.
ಅವರ ಧಾನ್ಯವೂ ದ್ರಾಕ್ಷಾರಸವೂ ಹೆಚ್ಚಿದ ಕಾಲಕ್ಕಿಂತ ಅಧಿಕ ವಾಗಿ ನನ್ನ ಹೃದಯದಲ್ಲಿ ಸಂತೋಷವನ್ನು ಇಟ್ಟಿದ್ದೀ.ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ.
ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.
ನಿನ್ನ ಮುಖವು ನಿನ್ನ ಸೇವಕನ ಮೇಲೆ ಪ್ರಕಾಶಿಸಲಿ, ನಿನ್ನ ಕರುಣೆಯಿಂದ ನನ್ನನ್ನು ರಕ್ಷಿಸು.
ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ.
ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.
ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
ನಿನ್ನ ಮುಖವನ್ನು ನಿನ್ನ ಸೇವಕನ ಮೇಲೆ ಪ್ರಕಾಶಿಸ ಮಾಡು ಮತ್ತು ನಿನ್ನ ನಿಯಮಗಳನ್ನು ನನಗೆ ಕಲಿಸು.
ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.
ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ?
ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.