Home Bibles ನಿರ್ಗಮಕಾಂಡ 33:19 · ಕನ್ನಡ ಬೈಬಲ್
ನಿರ್ಗಮಕಾಂಡ 33:19 · ಕನ್ನಡ ಬೈಬಲ್

ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.

Cross references

ನಿರ್ಗಮಕಾಂಡ 3:13

ಅದಕ್ಕೆ ಮೋಶೆಯು ದೇವರಿಗೆ--ಇಗೋ, ಇಸ್ರಾಯೇಲ್‌ ಮಕ್ಕಳ ಬಳಿಗೆ ಹೋಗಿ--ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರು ನನಗೆ--ಆತನ ಹೆಸರು ಏನು ಎಂದು ಕೇಳಿದರೆ ನಾನು ಅವರಿಗೆ ಏನು ಹೇಳಬೇಕು ಅಂದನು.

ನಿರ್ಗಮಕಾಂಡ 34:5

ಆಗ ಕರ್ತನು ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಅಲ್ಲಿ ನಿಂತುಕೊಂಡು ಕರ್ತನ ಹೆಸರನ್ನು ಪ್ರಕಟ ಮಾಡಿದನು.

ನೆಹೆಮ್ಯ 9:25

ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು.

ಕೀರ್ತನೆಗಳು 25:13

ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.

ಕೀರ್ತನೆಗಳು 65:4

ನೀನು ಆದುಕೊಂಡು ನಿನ್ನ ಬಳಿಗೆ ಬರ ಮಾಡಿಕೊಳ್ಳುವವನು ಧನ್ಯನು; ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿನ್ನ ಪರಿಶುದ್ಧ ಮಂದಿರ ವಾದ ನಿನ್ನ ಆಲಯದ ಒಳ್ಳೇದರಿಂದ ನಾವು ತೃಪ್ತರಾಗುವೆವು.

ಯೆಶಾಯ 7:14

ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್‌ ಎಂದು ಕರೆಯುವರು.

ಯೆಶಾಯ 9:6

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.

ಯೆಶಾಯ 12:4

ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.

ಯೆರೆಮಿಯ 31:12

ಆ ಕ್ರಯಪತ್ರವನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆಯೂ ಕ್ರಯಪತ್ರ ದಲ್ಲಿ ರುಜು ಹಾಕಿದ ಸಾಕ್ಷಿಗಳ ಮುಂದೆಯೂ ಸೆರೆ ಮನೆಯ ಅಂಗಳದಲ್ಲಿ ಕೂತುಕೊಂಡಿದ್ದ ಯೆಹೂದ್ಯ ರೆಲ್ಲರ ಮುಂದೆಯೂ ಮಹ್ಸೇಮನ ಮಗನಾದ ನೇರೀ ಯನ ಮಗನಾದ ಬಾರೂಕನಿಗೆ ಕೊಟ್ಟೆನು.

ಯೆರೆಮಿಯ 31:14

ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಈ ಪತ್ರಗಳನ್ನು ಅಂದರೆ ಮುದ್ರೆ ಹಾಕಿದ ಈ ಕ್ರಯಪತ್ರವನ್ನೂ ತೆರೆದಿರುವ ಈ ಪತ್ರವನ್ನೂ ತೆಗೆದು ಅವು ಬಹಳ ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.

ಜೆಕರ್ಯ 9:17

ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.

ರೋಮಾಪುರದವರಿಗೆ 2:4

ಇಲ್ಲವೆ ದೇವರ ದಯೆಯು ನಿನ್ನನ್ನು ಮಾನಸಾಂತರಕ್ಕೆ ನಡಿಸುತ್ತದೆಯೆಂದು ನೀನು ತಿಳಿಯದೆ ಆತನ ಅಪಾರವಾದ ದಯೆ ಸಹನೆ ದೀರ್ಘ ಶಾಂತಿ ಇವುಗಳನ್ನು ಅಸಡ್ಡೆಮಾಡುತ್ತೀಯೋ?

ರೋಮಾಪುರದವರಿಗೆ 9:15

ಆತನು ಮೋಶೆಗೆ--ಯಾವನ ಮೇಲೆ ನನಗೆ ಕರುಣೆ ಇದೆಯೋ ಅವನನ್ನು ಕರುಣಿಸುವೆನು ಮತ್ತು ಯಾವನ ಮೇಲೆ ನನಗೆ ದಯೆ ಇದೆಯೋ ಅವನಿಗೆ ದಯೆ ತೋರಿಸುವೆನು ಎಂದು ಹೇಳುತ್ತಾನೆ.

ರೋಮಾಪುರದವರಿಗೆ 9:23

ಮುಂಚಿತ ವಾಗಿಯೇ ತಾನು ಮಹಿಮೆಗೋಸ್ಕರ ಸಿದ್ಧಮಾಡಿದ ಕರುಣೆಯ ಪಾತ್ರೆಗಳಿಗೆ ತನ್ನ ಮಹಿಮಾತಿಶಯವನ್ನು ತಿಳಿಯಪಡಿಸುವವನಾಗಿ

ಎಫೆಸದವರಿಗೆ 1:6

ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ.

Interlinear

Choose Theme