ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ.
Cross references
ಕರ್ತನು ಮೋಶೆಗೆ--ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಕರ್ತನನ್ನು ನೋಡುವದಕ್ಕಾಗಿ ಮುಂದೆ ಬಂದು ಅವರಲ್ಲಿ ಬಹಳ ಜನರು ಸತ್ತಾರು.
ಅದರ ಹಾಗೆ ತೈಲ ಮಾಡುವವನೂ ಅದನ್ನು ಅನ್ಯನಿಗೆ ಕೊಡುವವನೂ ತನ್ನ ಜನರೊಳಗಿಂದ ತೆಗೆದುಹಾಕಲ್ಪಡಬೇಕು ಎಂದು ಹೇಳು ಅಂದನು.
ಅದರ ಪರಿಮಳವನ್ನು ನೋಡುವದಕ್ಕೆ ಅದರ ಹಾಗೆ ಮಾಡುವವನು ತನ್ನ ಜನರೊಳಗಿಂದ ತೆಗೆದು ಹಾಕಲ್ಪಡ ಬೇಕು ಅಂದನು.
ಇದಲ್ಲದೆ ಆರೋನನ ಕುಮಾರರಾದ ನಾದಾಬ್ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು.
ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು.
ತರುವಾಯ ಕರ್ತನು ಮೋಶೆಗೆ--ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಸಾಕ್ಷಿಯ ವಿಧಿಗಳ ಮುಂದೆ ತಿರಿಗಿ ಇಡು. ಹೀಗೆ ಅವರು ಸಾಯದ ಹಾಗೆ ನನ್ನ ಮುಂದೆ ಗುಣು ಗುಟ್ಟುವದನ್ನು ನನ್ನಿಂದ ನೀನು ಸಂಪೂರ್ಣವಾಗಿ ತೆಗೆದು ಬಿಡಬೇಕು ಅಂದನು.
ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು.
ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.
ಅವರು ನಾಕೋನನ ಕಣದ ಬಳಿಗೆ ಬಂದಾಗ ಉಜ್ಜನು ದೇವರ ಮಂಜೂಷವನ್ನು ಹಿಡಿಯುವದಕ್ಕೆ ತನ್ನ ಕೈಚಾಚಿ ಅದನ್ನು ಹಿಡಿದನು. ಯಾಕಂದರೆ ಎತ್ತುಗಳು ಎಡವಿದವು.