Home Bibles ☰ Books ಅಂಕೆಗಳ ಪುಸ್ತಕ 16:32 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 16:32 · ಕನ್ನಡ ಬೈಬಲ್

ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು.

Cross references

ಆದಿಕಾಂಡ 4:11

ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ.

ಅಂಕೆಗಳ ಪುಸ್ತಕ 4:18

ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ.

ಅಂಕೆಗಳ ಪುಸ್ತಕ 16:17

ಒಬ್ಬೊಬ್ಬನು ತನ್ನ ತನ್ನ ಧೂಪದ ಪಾತ್ರೆಯನ್ನು ತಕ್ಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ನಿಮ್ಮ ಧೂಪ ಪಾತ್ರೆಗಳನ್ನು ಕರ್ತನ ಎದುರಿಗೆ ತನ್ನಿರಿ. ನೀನೂ ಆರೋನನೂ ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಬನ್ನಿರಿ ಅಂದನು.

ಅಂಕೆಗಳ ಪುಸ್ತಕ 16:30

ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು.

ಅಂಕೆಗಳ ಪುಸ್ತಕ 26:10

ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು.

ಅಂಕೆಗಳ ಪುಸ್ತಕ 26:11

ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ.

ಅಂಕೆಗಳ ಪುಸ್ತಕ 27:3

ನಮ್ಮ ತಂದೆಯು ಅರಣ್ಯದಲ್ಲಿ ಸತ್ತನು; ಅವನು ಕೋರಹನ ಗುಂಪಿನಲ್ಲಿ ಕರ್ತನಿಗೆ ವಿರೋಧ ವಾಗಿ ಕೂಡಿಕೊಂಡವರ ಗುಂಪಿನೊಳಗಿರದೆ ತನ್ನ ಪಾಪದಲ್ಲಿಯೇ ಸತ್ತನು; ಅವನಿಗೆ ಕುಮಾರರು ಇರ ಲಿಲ್ಲ.

ದ್ವಿತೀಯೋಪದೇಶಕಾಂಡ 11:6

ಆತನು ರೂಬೇನನ ಮಗನಾದ ಎಲಿಯಾಬನ ಕುಮಾರರಾಗಿರುವ ದಾತಾನನಿಗೂ ಅಬೀರಾಮನಿಗೂ ಮಾಡಿದ್ದನ್ನೂ ಭೂಮಿಯು ತನ್ನ ಬಾಯನ್ನು ತೆರೆದು ಅವರ ಮನೆಗಳನ್ನೂ ಡೇರೆಗಳನ್ನೂ ಮೇರೆಗಳನ್ನೂ ಅವರಿಗಿದ್ದ ಎಲ್ಲಾ ಆಸ್ತಿಯನ್ನೂ ಸಮಸ್ತ ಇಸ್ರಾಯೇಲ್‌ ಮಧ್ಯದಲ್ಲಿ ಹೇಗೆ ನುಂಗಿತೆಂಬದನ್ನೂ ನೋಡದೆ ತಿಳಿಯದೆ ಇರುವ ನಿಮ್ಮ ಮಕ್ಕಳ ಸಂಗಡ ನಾನು ಮಾತನಾಡುವದಿಲ್ಲ.

1 ದಿನವೃತ್ತಾಂತ 6:22

ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು;

1 ದಿನವೃತ್ತಾಂತ 6:37

ಇವನು ತಹತನ ಮಗನು, ಇವನು ಅಸೀರನ ಮಗನು, ಇವನು ಎಬ್ಯಾಸಾಫನ ಮಗನು, ಇವನು ಕೋರಹನ ಮಗನು, ಇವನು ಇಚ್ಹಾರನ ಮಗನು

ಕೀರ್ತನೆಗಳು 84:1

ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!

ಕೀರ್ತನೆಗಳು 85:1

ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.

ಕೀರ್ತನೆಗಳು 88:1

ನನ್ನ ರಕ್ಷಣೆಯ ದೇವರಾದ ಓ ಕರ್ತನೇ, ಹಗಲಿರುಳು ನಿನ್ನ ಮುಂದೆ ಕೂಗುತ್ತೇನೆ.

ಕೀರ್ತನೆಗಳು 106:17

ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.

ಯೆಶಾಯ 5:14

ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.

Interlinear

Choose Theme