Home Bibles ಅಂಕೆಗಳ ಪುಸ್ತಕ 33:52 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 33:52 · ಕನ್ನಡ ಬೈಬಲ್

ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು.

Cross references

ನಿರ್ಗಮಕಾಂಡ 23:24

ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು.

ನಿರ್ಗಮಕಾಂಡ 23:31

ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.

ನಿರ್ಗಮಕಾಂಡ 34:12

ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಯನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವದು.

ನಿರ್ಗಮಕಾಂಡ 34:13

ಆದರೆ ನೀವು ಅವರ ಯಜ್ಞ ವೇದಿಗಳನ್ನು ಹಾಳುಮಾಡಿ ವಿಗ್ರಹಗಳನ್ನು ಒಡೆದು (ಅಶೇರ) ವಿಗ್ರಹ ಸ್ತಂಭಗಳನ್ನು ಕಡಿದುಹಾಕಬೇಕು.

ಲೇವ್ಯಕಾಂಡ 26:1

ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.

ದ್ವಿತೀಯೋಪದೇಶಕಾಂಡ 7:2

ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.

ದ್ವಿತೀಯೋಪದೇಶಕಾಂಡ 7:25

ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು; ಅವುಗಳ ಮೇಲಿರುವ ಬೆಳ್ಳಿ ಬಂಗಾರವನ್ನು ಆಶಿಸಿ ನೀನು ತಕ್ಕೊಳ್ಳಬಾರದು; ಅದು ನಿನಗೆ ಉರ್ಲಾ ದೀತು; ಅದು ನಿನ್ನ ದೇವರಾದ ಕರ್ತನಿಗೆ ಅಸಹ್ಯವೇ.ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.

ದ್ವಿತೀಯೋಪದೇಶಕಾಂಡ 12:2

ನೀವು ಸ್ವಾಧೀನಮಾಡಿಕೊಳ್ಳುವ ಜನಾಂಗ ಗಳು ತಮ್ಮ ದೇವರುಗಳಿಗೆ ಎತ್ತರವಾದ ಬೆಟ್ಟಗಳ ಮೇಲೆಯೂ ಗುಡ್ಡಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಸೇವೆಮಾಡಿದ ಸ್ಥಳಗಳನ್ನು, ನೀವು ಪೂರ್ಣವಾಗಿ ನಾಶಮಾಡಬೇಕು.

ದ್ವಿತೀಯೋಪದೇಶಕಾಂಡ 12:30

ಅವು ನಿನ್ನ ಮುಂದೆ ನಾಶವಾದ ಮೇಲೆ ನೀನು ಅವುಗಳನ್ನು ಅನುಸರಿಸಿ ಬಲೆಯಲ್ಲಿ ಸಿಕ್ಕಿಬೀಳದ ಹಾಗೆಯೂ--ಈ ಜನಾಂಗಗಳು ತಮ್ಮ ದೇವರುಗಳನ್ನು ಹೇಗೆ ಸೇವಿಸಿದವೋ ನಾನೂ ಹಾಗೆ ಮಾಡುತ್ತೇನೆಂದು ಹೇಳಿ ಅವರ ದೇವರುಗಳನ್ನು ಕುರಿತು ವಿಚಾರಿಸದ ಹಾಗೆಯೂ ನೋಡಿಕೋ.

ದ್ವಿತೀಯೋಪದೇಶಕಾಂಡ 20:16

ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು.

ದ್ವಿತೀಯೋಪದೇಶಕಾಂಡ 31:5

ನಾನು ನಿಮಗೆ ಆಜ್ಞಾಪಿಸಿದ ಸಮಸ್ತ ಆಜ್ಞೆಯ ಪ್ರಕಾರ ನೀವು ಅವರಿಗೆ ಮಾಡುವಹಾಗೆ ಕರ್ತನು ಅವರನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವನು.

ಯೆಹೋಶುವ 9:7

ಆಗ ಇಸ್ರಾಯೇಲ್‌ ಮನುಷ್ಯರು ಹಿವ್ವಿಯರಿಗೆ--ನೀವು ಒಂದು ವೇಳೆ ನಮ್ಮ ಮಧ್ಯದಲ್ಲಿ ವಾಸಿಸುವವರು ಆಗಿರಬಹುದು; ಆದರೆ ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವದು ಹೇಗೆ ಅಂದರು.

ಯೆಹೋಶುವ 11:11

ಅವರು ಶ್ವಾಸವುಳ್ಳ ಒಂದನ್ನಾದರೂ ಉಳಿಸದೆ ಅದರಲ್ಲಿರುವ ಪ್ರಾಣಗಳನ್ನೆಲ್ಲಾ ಕತ್ತಿಯಿಂದ ಹೊಡೆದು ಸಂಪೂರ್ಣವಾಗಿ ನಾಶಮಾಡಿ ಹಾಚೋರನ್ನು ಬೆಂಕಿ ಯಿಂದ ಸುಟ್ಟುಬಿಟ್ಟರು.

ಯೆಹೋಶುವ 11:15

ಕರ್ತನು ತನ್ನ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿ ದನು. ಯೆಹೋಶುವನು ಹಾಗೆಯೇ ಮಾಡಿದನು. ಕರ್ತನು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಅವನು ಮಾಡದೆ ಉಳಿಸಲಿಲ್ಲ.

ಯೆಹೋಶುವ 23:7

ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರದೆ ಅವರ ದೇವರುಗಳ ಹೆಸರುಗಳನ್ನು ಸ್ಮರಿಸದೆ ಅವುಗಳ ಮೇಲೆ ಆಣೆ ಇಡದೆ ನೀವು ಅವುಗಳಿಗೆ ಸೇವೆಮಾಡದೆ ಅಡ್ಡಬೀಳದೆ ಇರುವ ಹಾಗೆ ಬಲ ಗೊಂಡು

ನ್ಯಾಯಾಧಿಪತಿಗಳು 2:2

ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ ಅವರ ಬಲಿಪೀಠಗಳನ್ನು ಕೆಡವಿ ಬಿಡಿರಿ ಎಂದು ಹೇಳಿದೆನು. ಆದರೆ ನೀವು ನನ್ನ ಮಾತಿಗೆ ವಿಧೇಯರಾಗಲಿಲ್ಲ; ಹೀಗೆ ಯಾಕೆ ಮಾಡಿ ದಿರಿ?

1 ಅರಸುಗಳು 11:7

ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್‌ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್‌ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.

ಕೀರ್ತನೆಗಳು 106:34

ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.

Interlinear

Choose Theme