Home Bibles ಅಂಕೆಗಳ ಪುಸ್ತಕ 28:7 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 28:7 · ಕನ್ನಡ ಬೈಬಲ್

ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು;

Cross references

ನಿರ್ಗಮಕಾಂಡ 29:40

ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.

ನಿರ್ಗಮಕಾಂಡ 29:42

ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು.

ನಿರ್ಗಮಕಾಂಡ 30:9

ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ ದಹನಬಲಿಗಳನ್ನಾಗಲಿ ಆಹಾರಾರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು.

ಲೇವ್ಯಕಾಂಡ 1:9

ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.

ಲೇವ್ಯಕಾಂಡ 23:13

ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು.

ಅಂಕೆಗಳ ಪುಸ್ತಕ 15:5

ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡವೂ ಇಲ್ಲವೆ ಬಲಿಯ ಸಂಗಡವೂ ಒಂದು ಕುರಿಗೋಸ್ಕರ ಹಿನ್ನಿನ ನಾಲ್ಕನೇ ಭಾಗದ ದ್ರಾಕ್ಷಾರಸವನ್ನು ಅರ್ಪಿಸಬೇಕು.

ಅಂಕೆಗಳ ಪುಸ್ತಕ 15:7

ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು.

ಅಂಕೆಗಳ ಪುಸ್ತಕ 15:10

ಪಾನದ ಅರ್ಪಣೆಗಾಗಿ ಅರ್ಧ ಹಿನ್ನಿನ ದ್ರಾಕ್ಷಾರಸವನ್ನು ಬೆಂಕಿಯಿಂದ ಮಾಡಿದ ಅರ್ಪಣೆ ಗಾಗಿ ಕರ್ತನಿಗೆ ಸುವಾಸನೆಯಾದ ದಹನಬಲಿಗಾಗಿ ತರಬೇಕು.

ಅಂಕೆಗಳ ಪುಸ್ತಕ 28:14

ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ.

ಅಂಕೆಗಳ ಪುಸ್ತಕ 28:31

ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.

ಯೆಶಾಯ 57:6

ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?

ಯೋವೇಲ 1:9

ಆಹಾರ ದರ್ಪಣೆಯೂ ಪಾನಾರ್ಪಣೆಯೂ ಕರ್ತನ ಆಲಯದೊಳಗಿಂದ ತೆಗೆಯಲ್ಪಟ್ಟಿವೆ; ಕರ್ತನ ಸೇವಕ ರಾದ ಯಾಜಕರು ಗೋಳಾಡುತ್ತಾರೆ.

ಯೋವೇಲ 1:13

ಯಾಜಕರೇ, ನಿಮ್ಮ ನಡುಕಟ್ಟಿಕೊಂಡು ಗೋಳಾ ಡಿರಿ; ಬಲಿಪೀಠದ ಸೇವಕರೇ, ಗೋಳಾಡಿರಿ; ನನ್ನ ದೇವರ ಸೇವಕರೇ, ಬಂದು ಗೋಣೀತಟ್ಟಿನಲ್ಲಿ ರಾತ್ರಿ ಯೆಲ್ಲಾ ಮಲಗಿರಿ, ಯಾಕಂದರೆ ಆಹಾರದರ್ಪಣೆಯೂ ಪಾನ ದರ್ಪಣೆಯೂ ನಿಮ್ಮ ದೇವರ ಆಲಯದಿಂದ ಹಿಂತೆಗೆಯಲ್ಪಟ್ಟಿವೆ.

ಯೋವೇಲ 2:14

ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?

ಫಿಲಿಪ್ಪಿಯವರಿಗೆ 2:17

ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.

Interlinear

Choose Theme