Home Bibles ಅಂಕೆಗಳ ಪುಸ್ತಕ 26:57 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 26:57 · ಕನ್ನಡ ಬೈಬಲ್

ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.

Cross references

ಆದಿಕಾಂಡ 46:11

ಲೇವಿಯ ಮಕ್ಕಳು: ಗೆರ್ಷೋನ್‌ ಕೆಹಾತ್‌ ಮೆರಾರೀ ಎಂಬವರು.

ನಿರ್ಗಮಕಾಂಡ 6:16

ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್‌ ಕೆಹಾತ್‌ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು.

ನಿರ್ಗಮಕಾಂಡ 6:25

ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಳನ್ನು ತನಗೆ ಹೆಂಡತಿ ಯಾಗಿ ತಕ್ಕೊಂಡನು. ಆಕೆಯು ಅವನಿಗೆ--ಫಿನೇಹಾಸ ನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿ ಯರ ತಂದೆಗಳ ಮುಖ್ಯಸ್ಥರು.

ಅಂಕೆಗಳ ಪುಸ್ತಕ 3:1

ಕರ್ತನು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿನದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ:

ಅಂಕೆಗಳ ಪುಸ್ತಕ 3:15

ಲೇವಿಯ ಕುಮಾರರನ್ನು ಅವರ ತಂದೆಗಳ ಮನೆಯ ಪ್ರಕಾರ ವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸು. ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು ಅಂದನು.

ಅಂಕೆಗಳ ಪುಸ್ತಕ 3:17

ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.

ಅಂಕೆಗಳ ಪುಸ್ತಕ 35:2

ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು.

1 ದಿನವೃತ್ತಾಂತ 6:1

ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು.

1 ದಿನವೃತ್ತಾಂತ 6:16

ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು.

Interlinear

Choose Theme