Home Bibles ಅಂಕೆಗಳ ಪುಸ್ತಕ 16:7 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 16:7 · ಕನ್ನಡ ಬೈಬಲ್

ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ ಅವುಗಳ ಮೇಲೆ ಧೂಪವನ್ನು ಕರ್ತನ ಮುಂದೆ ಹಾಕಿರಿ; ಆಗ ಕರ್ತನು ಯಾವನನ್ನು ಆದುಕೊಳ್ಳುವನೋ ಅವನೇ ಪರಿ ಶುದ್ಧನಾಗಿರುವನು; ಲೇವಿಯ ಮಕ್ಕಳೇ, ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ ಎಂದು ಹೇಳಿದನು.

Cross references

ಅಂಕೆಗಳ ಪುಸ್ತಕ 16:3

ಅವರು ಮೋಶೆಗೂ ಆರೋನ ನಿಗೂ ವಿರೋಧವಾಗಿ ಕೂಡಿಕೊಂಡು--ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ; ಸಭೆಯೂ ಸಭೆ ಯಲ್ಲಿರುವ ಎಲ್ಲರೂ ಪರಿಶುದ್ಧರೇ, ಕರ್ತನು ಅವರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ನೀವು ನಿಮ್ಮನ್ನು ಸಭೆಗಿಂತ ಹೆಚ್ಚಾಗಿ ನೀವೇ ಹೆಚ್ಚಿಸಿಕೊಳ್ಳು ವದು ಯಾಕೆ ಎಂದು ಅವರಿಗೆ ಹೇಳಿದರು.

ಅಂಕೆಗಳ ಪುಸ್ತಕ 16:5

ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ:

1 ಅರಸುಗಳು 18:17

ಅಹಾಬನು ಎಲೀಯನನ್ನು ನೋಡಿದಾಗ ಅವನಿಗೆ--ಇಸ್ರಾಯೇಲ್ಯರನ್ನು ಕಳವಳ ಗೊಳಿಸುವವನು ನೀನಲ್ಲವೋ ಅಂದನು.

ಕೀರ್ತನೆಗಳು 106:16

ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು.

ಮತ್ತಾಯ 21:23

ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.

ಎಫೆಸದವರಿಗೆ 1:4

ನಾವು ಪ್ರೀತಿಯಲ್ಲಿದ್ದು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಆತನು ಜಗತ್ತಿಗೆ ಅಸ್ತಿವಾರ ಹಾಕುವದಕ್ಕಿಂತ ಮುಂಚೆ ನಮ್ಮನು ಕ್ರಿಸ್ತನಲ್ಲಿ) ಆರಿಸಿಕೊಂಡನು.

2 ತೆಸಲೋನಿಕದವರಿಗೆ 2:13

ಕರ್ತನಿಗೆ ಪ್ರಿಯರಾಗಿರುವ ಸಹೊದರರೇ, ನೀವು ಆತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ದರಾಗಿದ್ದೇವೆ

1 ಪೇತ್ರ 2:9

ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.

Interlinear

Choose Theme