ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.
Cross references
ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.
ಆರೋನನ ಕುಮಾರರಲ್ಲಿ ವರ್ಗಗಳಾಗಿ ವಿಭಾಗಿಸಿದವರು ಇವರೇ. ಆರೋನನ ಕುಮಾರರು--ನಾದಾಬನೂ ಅಬೀಹುವೂ ಎಲ್ಲಾಜಾ ರನೂ ಈತಾಮಾರನೂ;
ಅವರಿಗೆ--ನೀವು ಸಹ ದ್ರಾಕ್ಷೇ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುವೆನು ಎಂದು ಹೇಳಿದನು. ಆಗ ಅವರು ಹೊರಟು ಹೋದರು.
ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
ಅವರು ತಿರಿಗಿ ಯೆರೂಸಲೇಮಿಗೆ ಬಂದರು; ಮತ್ತು ಆತನು ದೇವಾಲಯದಲ್ಲಿ ತಿರುಗಾಡುತ್ತಿರುವಾಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನ ಬಳಿಗೆ ಬಂದು
ಇದಲ್ಲದೆ ಆತನು ಪ್ರತಿದಿನವೂ ದೇವಾಲಯ ದಲ್ಲಿ ಬೋಧಿಸುತ್ತಿದ್ದನು. ಆದರೆ ಪ್ರಧಾನಯಾಜಕರೂ ಶಾಸ್ತ್ರಿಗಳೂ ಜನರ ಪ್ರಮುಖರೂ ಆತನನ್ನು ಕೊಲ್ಲು ವದಕ್ಕೆ ಹವಣಿಸುತ್ತಿದ್ದರು.ಆದರೆ ಅವರು ಏನು ಮಾಡಬೇಕೆಂಬದನ್ನು ಕಂಡುಕೊಳ್ಳದೆ ಹೋದರು; ಯಾಕಂದರೆ ಜನರೆಲ್ಲರೂ ಆತನು ಹೇಳುವದನು ಬಹಳ ಲಕ್ಷ್ಯಕೊಟ್ಟು ಆತನ ಉಪದೇಶ ವನ್ನು ಕೇಳುತ್ತಿದ್ದರು.
ಇವರು ಅಪೊಸ್ತಲರನ್ನು ಮಧ್ಯೆ ನಿಲ್ಲಿಸಿ--ನೀವು ಎಂಥಾ ಶಕ್ತಿಯಿಂದ ಇಲ್ಲವೆ ಯಾವ ಹೆಸರಿನಿಂದ ಇದನ್ನು ಮಾಡಿದಿರಿ ಎಂದು ಕೇಳಿದರು.
ಆದರೆ ತನ್ನ ನೆರೆಯವನಿಗೆ ಅನ್ಯಾಯಮಾಡುತ್ತಿದ್ದವನು--ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿದವರು ಯಾರು?