ಇದಲ್ಲದೆ ನಿಮ್ಮ ಮಕ್ಕಳು ನಾಲ್ವತ್ತು ವರುಷ ಅರಣ್ಯದಲ್ಲಿ ಅಲೆದಾಡಿ ನಿಮ್ಮ ಹೆಣಗಳು ಅರಣ್ಯದಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಜಾರತ್ವ ಗಳನ್ನು ತಾಳಿಕೊಳ್ಳುವರು.
Cross references
ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ.
ಹಾಗೆ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪೋ ದ್ರೇಕಗೊಂಡದ್ದರಿಂದ ಆತನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಮಸ್ತ ಸಂತತಿಯು ನಾಶವಾಗುವ ವರೆಗೆ ಅವರನ್ನು ಅರಣ್ಯದಲ್ಲಿ ನಾಲ್ವತ್ತು ವರುಷ ಅಲೆದಾಡು ವಂತೆ ಮಾಡಿದನು.
ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.
ನಾಲ್ವತ್ತನೇ ವರುಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಇಸ್ರಾಯೇಲ್ ಮಕ್ಕಳಿಗೆ, ಕರ್ತನು ಅವನಿಗೆ ಅವರ ವಿಷಯ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾತನಾಡಿದನು.
ನಾವು ಕಾದೇಶ್‌ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು.
ಕರ್ತನ ಸ್ವರಕ್ಕೆ ವಿಧೇಯರಾಗದೆ ಹೋದದರಿಂದ ಐಗುಪ್ತದಿಂದ ಹೊರಟ ಯುದ್ಧದ ಮನುಷ್ಯರಾದ ಜನರೆಲ್ಲಾ ನಾಶವಾಗುವ ವರೆಗೂ ಇಸ್ರಾಯೇಲ್ ಮಕ್ಕಳು ನಾಲ್ವತ್ತು ವರುಷಗಳು ಅರಣ್ಯದಲ್ಲಿ ಅಲೆದಾಡು ತ್ತಿದ್ದರು; ಯಾಕಂದರೆ ನಮಗೆ ಕೊಡುವದಕ್ಕೆ ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ದೇಶವನ್ನು ಅಂದರೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ತೋರಿಸುವದಿಲ್ಲ ಎಂದು ಕರ್ತನು ಅವರಿಗೆ ಆಣೆ ಇಟ್ಟಿದ್ದನು.
ಈಗ ಇಗೋ, ಕರ್ತನು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿ ಸಂಚರಿಸಿದ ನಾಲ್ವತ್ತೈದು ವರುಷ ಕರ್ತನು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾನೆ. ಈಗ ಇಗೋ, ನಾನು ಇಂದು ಎಂಭತ್ತೈದು ವರುಷ ಪ್ರಾಯದವನಾಗಿದ್ದೇನೆ.
ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.
ಅರಣ್ಯದಲ್ಲಿಯೂ ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು ವಾಸಿಸುವದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ,
ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.
ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಟ್ಟಾಗ ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನವಳಾದರೆ ಅವನು ಇನ್ನು ಅವಳ ಹತ್ತಿರ ಹಿಂತಿರುಗುವನೋ? ಆ ದೇಶವು ಬಹಳವಾಗಿ ಅಪವಿತ್ರವಾಗುವದಿಲ್ಲವೋ? ನೀನು ಅನೇಕ ಮಿಂಡರ ಸಂಗಡ ಸೂಳೆತನ ಮಾಡಿದ್ದೀ; ಆದಾಗ್ಯೂ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ.
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನ ಹಿಂದಕ್ಕೆ ಎಸೆದು ಮರೆತದ್ದರಿಂದ ನಿನ್ನ ದುಷ್ಕರ್ಮವನ್ನೂ ವ್ಯಭಿಚಾರವನ್ನೂ ಅನುಭವಿಸಲೇಬೇಕು.
ನೀತಿ ಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ ವ್ಯಭಿ ಚಾರಿಣಿಯರಿಗೂ ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿ ಯರು, ಅವರ ಕೈ ರಕ್ತವಾಗಿದೆ.
ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.