Home Bibles ಅಂಕೆಗಳ ಪುಸ್ತಕ 5:31 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 5:31 · ಕನ್ನಡ ಬೈಬಲ್

ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ.

Cross references

ಲೇವ್ಯಕಾಂಡ 20:10

ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.

ಲೇವ್ಯಕಾಂಡ 20:17

ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯನ್ನು ತೆಗೆದುಕೊಂಡು ಅವಳ ಬೆತ್ತಲೆ ತನವನ್ನು ನೋಡಿದರೆ ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ; ಅವರು ತಮ್ಮ ಜನರ ದೃಷ್ಟಿಯಲ್ಲಿಯೇ ತೆಗೆದು ಹಾಕಲ್ಪಡಬೇಕು; ಅವರ ರಕ್ತವು ಅವರ ಮೇಲೆ ಇರುವದು. ಅವನು ತನ್ನ ಸಹೋದರಿಯ ಬೆತ್ತಲೆತನ ವನ್ನು ಕಾಣುವಂತೆ ಮಾಡಿದ್ದರಿಂದ ತನ್ನ ಅಪರಾಧ ವನ್ನು ತಾನೇ ಹೊತ್ತುಕೊಳ್ಳುವನು.

ಅಂಕೆಗಳ ಪುಸ್ತಕ 9:13

ಆದರೆ ಶುದ್ಧನಾದ ಮನುಷ್ಯನೂ ಪ್ರಯಾಣಮಾಡದವನೂ ಪಸ್ಕವನ್ನು ಆಚರಿಸುವದಕ್ಕೆ ತಪ್ಪಿದರೆ ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು; ಅವನು ಕರ್ತನ ಅರ್ಪಣೆಯನ್ನು ಅದರ ಸಮಯದಲ್ಲಿ ತಾರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.

ಕೀರ್ತನೆಗಳು 37:6

ನಿನ್ನ ನೀತಿಯನ್ನು ಬೆಳಕಿನ ಹಾಗೆಯೂ ನಿನ್ನ ನ್ಯಾಯಗಳನ್ನು ಮಧ್ಯಾಹ್ನದ ಹಾಗೆಯೂ ಆತನು ಹೊರಗೆ ಬರ ಮಾಡುವನು.

ಯೆಹೆಜ್ಕೇಲ 18:4

ಇಗೋ, ಎಲ್ಲಾ ಪ್ರಾಣಗಳು ನನ್ನವೇ; ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ; ಪಾಪ ಮಾಡುವವನೇ ತಾನಾ ಗಿಯೇ ಸಾಯುವನು.

ರೋಮಾಪುರದವರಿಗೆ 2:8

ಕಲಹಪ್ರಿಯ ರಾಗಿದ್ದು ಸತ್ಯಕ್ಕೆ ವಿಧೇಯರಾಗದೆ ಅನೀತಿಗೆ ವಿಧೇಯ ರಾಗಿ

Interlinear

Choose Theme