Home Bibles ಅಂಕೆಗಳ ಪುಸ್ತಕ 12:1 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 12:1 · ಕನ್ನಡ ಬೈಬಲ್

ಮೋಶೆಯು ಮದುವೆಯಾಗಿದ್ದ ಐಥೋಪ್ಯಳಾದ ಸ್ತ್ರೀಯ ನಿಮಿತ್ತ ಮಿರ್ಯಾಮಳೂ ಆರೋನನೂ ಅವನಿಗೆ ವಿರೋಧವಾಗಿ ಮಾತ ನಾಡಿದರು. ಯಾಕಂದರೆ ಅವನು ಐಥೋಪ್ಯಳಾದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು.

Cross references

ಆದಿಕಾಂಡ 24:3

ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ

ಆದಿಕಾಂಡ 24:37

ನನ್ನ ಯಜಮಾನನು--ನಾನು ಯಾರ ದೇಶದಲ್ಲಿ ವಾಸ ಮಾಡುತ್ತೇನೋ ಆ ಕಾನಾನ್ಯರ ಕುಮಾರ್ತೆಗಳಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳಬೇಡ;

ಆದಿಕಾಂಡ 26:34

ಏಸಾವನು ನಾಲ್ವತ್ತು ವರುಷದವನಾಗಿದ್ದಾಗ ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತ ಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಹೆಂಡತಿಯರನ್ನಾಗಿ ತಕ್ಕೊಂಡನು.ಇವರು ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಯಾಗಿದ್ದರು.

ಆದಿಕಾಂಡ 27:46

ತರುವಾಯ ರೆಬೆಕ್ಕಳು ಇಸಾಕನಿಗೆ--ಹೇತನ ಕುಮಾರ್ತೆಗಳ ದೆಸೆಯಿಂದ ನನ್ನ ಜೀವ ನನಗೆ ಬೇಸರವಾಗಿದೆ; ಹೇತನ ಕುಮಾರ್ತೆಗಳಂತಿರುವ ಈ ದೇಶದ ಕುಮಾರ್ತೆಗಳಲ್ಲಿ ಒಬ್ಬಳನ್ನು ಯಾಕೋಬನು ಹೆಂಡತಿಯಾಗಿ ತಕ್ಕೊಂಡರೆ ನಾನು ಬದುಕುವದರಿಂದ ನನಗೇನು ಪ್ರಯೋಜನ ಅಂದಳು.

ಆದಿಕಾಂಡ 28:6

ಇಸಾಕನು ಯಾಕೋಬನನ್ನು ಆಶೀರ್ವದಿಸಿ ಅವನಿಗೆ ಹೆಂಡತಿಯನ್ನು ತಕ್ಕೊಳ್ಳುವದಕ್ಕೆ ಪದ್ದನ್‌ ಅರಾಮಿಗೆ ಕಳುಹಿಸಿದ್ದನ್ನೂ ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ ಅವನಿಗೆ--ನೀನು ಕಾನಾನ್ಯರ ಕುಮಾರ್ತೆಯರಲ್ಲಿ ಹೆಂಡತಿಯನ್ನು ತಕ್ಕೊಳ್ಳಬಾರದು ಎಂದು ಆಜ್ಞಾಪಿಸಿದ್ದನ್ನೂ

ಆದಿಕಾಂಡ 34:14

ಯಾಕೋಬನ ಮಕ್ಕಳು ಅವರಿಗೆ--ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ.

ಆದಿಕಾಂಡ 41:45

ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್‌ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು.

ನಿರ್ಗಮಕಾಂಡ 2:16

ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು.

ನಿರ್ಗಮಕಾಂಡ 2:21

ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವದಕ್ಕೆ ಸಮ್ಮತಿ ಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರ ಳನ್ನು ಕೊಟ್ಟನು.

ನಿರ್ಗಮಕಾಂಡ 34:16

ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.

ಲೇವ್ಯಕಾಂಡ 21:14

ವಿಧವೆ ಯನ್ನಾಗಲಿ, ಬಿಡಲ್ಪಟ್ಟ ಸ್ತ್ರೀಯನ್ನಾಗಲಿ, ಅಪವಿತ್ರ ಳನ್ನಾಗಲಿ, ಇಲ್ಲವೆ ಸೂಳೆಯನ್ನಾಗಲಿ, ಇಂಥವರನ್ನು ಅವನು ತೆಗೆದುಕೊಳ್ಳಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು.

ಅಂಕೆಗಳ ಪುಸ್ತಕ 16:2

ಇಸ್ರಾಯೇಲ್‌ ಮಕ್ಕಳೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯಲ್ಲಿ ಪ್ರಸಿದ್ಧ ರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಯ ಮುಂದೆ ಎದ್ದರು.

ಅಂಕೆಗಳ ಪುಸ್ತಕ 26:59

ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.

ಮತ್ತಾಯ 10:36

ಒಬ್ಬ ಮನುಷ್ಯನಿಗೆ ಅವನ ಮನೆ ಯವರೇ ವಿರೋಧಿಗಳಾಗಿರುವರು.

ಮತ್ತಾಯ 12:48

ಅದಕ್ಕೆ ಆತನು ತನಗೆ ಹೇಳಿದವನಿಗೆ ಪ್ರತ್ಯುತ್ತರವಾಗಿ--ನನ್ನ ತಾಯಿ ಯಾರು? ಮತ್ತು ನನ್ನ ಸಹೋದರರು ಯಾರು? ಎಂದು ಹೇಳಿ ಶಿಷ್ಯರ ಕಡೆಗೆ ತನ್ನ ಕೈಚಾಚಿ--

ಯೋಹಾನ 7:5

ಯಾಕಂದರೆ ಆತನ ಸಹೋದರರು ಸಹ ಆತನ ಮೇಲೆ ನಂಬಿಕೆ ಇಟ್ಟಿರಲಿಲ್ಲ.

ಯೋಹಾನ 15:20

ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು.

ಗಲಾತ್ಯದವರಿಗೆ 4:16

ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳು ವದರಿಂದ ನಿಮಗೆ ಶತ್ರುವಾಗಿದ್ದೇನೋ?

Interlinear

Choose Theme