ಏಸಾವನು ನಾಲ್ವತ್ತು ವರುಷದವನಾಗಿದ್ದಾಗ ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತ ಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಹೆಂಡತಿಯರನ್ನಾಗಿ ತಕ್ಕೊಂಡನು.ಇವರು ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಯಾಗಿದ್ದರು.
Cross references
ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ
ಅವನು ಇಷ್ಮಾಯೇಲನ ಬಳಿಗೆ ಹೋಗಿ ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗನಾದ ಇಷ್ಮಾ ಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತ್‌ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು.
ಏಸಾವನು ಕಾನಾನ್ಯರ ಕುಮಾರ್ತೆಯರನ್ನು ಅಂದರೆ ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,
ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು.
ರೆಗೂವೇಲನ ಮಕ್ಕಳು ಯಾರಂದರೆ: ನಹತ್ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.
ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.
ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ.
ಯಾವ ಜಾರನಾಗಲಿ--ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆ ಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದು ತುತ್ತನ್ನಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿ ಬಿಟ್ಟನು;