Home Bibles ನೆಹೆಮ್ಯ 8:17 · ಕನ್ನಡ ಬೈಬಲ್
ನೆಹೆಮ್ಯ 8:17 · ಕನ್ನಡ ಬೈಬಲ್

ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್‌ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.

Cross references

ದ್ವಿತೀಯೋಪದೇಶಕಾಂಡ 16:15

ನಿನ್ನ ದೇವರಾದ ಕರ್ತನಿಗೆ ಏಳು ದಿವಸ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು; ನಿನ್ನ ದೇವರಾದ ಕರ್ತನು ನಿನ್ನನ್ನು ಎಲ್ಲಾ ಆದಾಯದಲ್ಲಿಯೂ ಎಲ್ಲಾ ಕೈಕೆಲಸದಲ್ಲಿಯೂ ಆಶೀರ್ವದಿಸುವದರಿಂದ ನೀನು ನಿಜವಾಗಿಯೂ ಸಂತೋಷದಿಂದ ಇರಬೇಕು.

ಯೆಹೋಶುವ 1:1

ಕರ್ತನ ಸೇವಕನಾದ ಮೋಶೆ ಸತ್ತ ತರುವಾಯ ಕರ್ತನು ಮೋಶೆಯ ಸೇವಕನಾದ ನೂನನ ಮಗನಾಗಿರುವ ಯೆಹೋಶುವನಿಗೆ--

1 ದಿನವೃತ್ತಾಂತ 29:22

ಎರಡನೇ ಸಾರಿ ದಾವೀದನ ಮಗನಾದ ಸೊಲೊಮೋನನನ್ನು ಅರಸನನ್ನಾಗಿ ಮಾಡಿ ಕರ್ತನ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕ ನನ್ನು ಯಾಜಕನಾಗಿಯೂ ಅಭಿಷೇಕಿಸಿದರು.

2 ದಿನವೃತ್ತಾಂತ 7:8

ಅದೇ ಕಾಲ ದಲ್ಲಿ ಸೊಲೊಮೋನನು ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತ ನದಿಯ ವರೆಗೆ ಇರುವ ಮಹಾ ಸಭೆಯಾದ ಸಮಸ್ತ ಇಸ್ರಾಯೇಲ್ಯರು ಏಳು ದಿವಸ ಹಬ್ಬವನ್ನು ಮಾಡಿದರು.

2 ದಿನವೃತ್ತಾಂತ 8:13

ದಿನಂಪ್ರತಿಯಲ್ಲಿ ಮೋಶೆಯ ಆಜ್ಞೆ ಪ್ರಕಾರ ಸಬ್ಬ ತ್ತುಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವರುಷದಲ್ಲಿ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿ ಇಲ್ಲದ ರೊಟ್ಟಿಯ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಪರ್ಣಶಾಲೆಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.

2 ದಿನವೃತ್ತಾಂತ 30:21

ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು.

2 ದಿನವೃತ್ತಾಂತ 30:23

ಆದರೆ ಸಮೂಹವೆಲ್ಲಾ ಮತ್ತೂ ಏಳು ದಿವಸ ಆಚರಿಸುವದಕ್ಕೆ ಯೋಚಿಸಿಕೊಂಡ ಮೇಲೆ ಏಳು ದಿವಸಗಳು ಸಂತೋಷವಾಗಿ ಆಚರಿಸಿದರು.

2 ದಿನವೃತ್ತಾಂತ 30:26

ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನ ಕಾಲ ಮೊದಲುಗೊಂಡು ಯೆರೂ ಸಲೇಮಿನಲ್ಲಿ ಇದರ ಹಾಗೆ ನಡೆದಿರಲಿಲ್ಲವಾದದ ರಿಂದ ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು.ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.

2 ದಿನವೃತ್ತಾಂತ 35:18

ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.

ಎಜ್ರಾ 3:4

ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.

ಯೋಹಾನ 1:14

ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).

ಹೆಬ್ರಿಯರಿಗೆ 4:8

ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.

ಹೆಬ್ರಿಯರಿಗೆ 11:9

ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು.

ಹೆಬ್ರಿಯರಿಗೆ 11:13

ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು.

Interlinear

Choose Theme