Home Bibles ನೆಹೆಮ್ಯ 8:16 · ಕನ್ನಡ ಬೈಬಲ್
ನೆಹೆಮ್ಯ 8:16 · ಕನ್ನಡ ಬೈಬಲ್

ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು.

Cross references

ದ್ವಿತೀಯೋಪದೇಶಕಾಂಡ 22:8

ನೀನು ಹೊಸ ಮನೆಯನ್ನು ಕಟ್ಟಿದಾಗ ಯಾವನಾ ದರೂ ಅದರ ಮೇಲಿನಿಂದ ಬೀಳುವ ಪಕ್ಷದಲ್ಲಿ ನೀನು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಗೆ ಸಣ್ಣಗೋಡೆ ಕಟ್ಟಬೇಕು.

2 ಸಮುವೇಲ 11:2

ಆಗ ಆದದ್ದೇನಂದರೆ, ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇರುವಾಗ ಸ್ನಾನಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಉಪ್ಪರಿಗೆಯ ಮೇಲಿನಿಂದ ನೋಡಿದನು.

2 ಅರಸುಗಳು 14:13

ಆಗ ಇಸ್ರಾಯೇಲ್ಯರ ಅರಸನಾದ ಯೋವಾಷನು ಅಹಜ್ಯನ ಮಗನಾದ ಯೆಹೋವಾಷನ ಮಗನಾಗಿ ರುವ ಯೆಹೂದದ ಅರಸನಾದ ಅಮಚ್ಯನನ್ನು ಬೇತ್ಷೆ ಮೆಷಿನ ಬಳಿಯಲ್ಲಿ ಹಿಡುಕೊಂಡು ಯೆರೂಸಲೇಮಿಗೆ ಬಂದು ಯೆರೂಸಲೇಮಿನ ಎಫ್ರಾಯಾಮಿನ ಬಾಗಲು ಮೊದಲುಗೊಂಡು ಮೂಲೆಯ ಬಾಗಲ ವರೆಗೂ ನಾನೂರು ಮೊಳ ಉದ್ದದ ಗೋಡೆಯನ್ನು ಕೆಡವಿಬಿಟ್ಟು

2 ದಿನವೃತ್ತಾಂತ 20:5

ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ

2 ದಿನವೃತ್ತಾಂತ 33:5

ಕರ್ತನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.

ನೆಹೆಮ್ಯ 3:26

ಓಫೇಲಿನಲ್ಲಿ ವಾಸವಾಗಿರುವ ನೆತಿನಿಯರು ಮೂಡಣ ಪಾರ್ಶ್ವವಾಗಿರುವ ನೀರು ಬಾಗಲಿಗೆದುರಾದ ಹೊರಪಾರ್ಶ್ವದಲ್ಲಿರುವ ಗೋಪುರದ ವರೆಗೂ ಭದ್ರ ಪಡಿಸಿದರು.

ನೆಹೆಮ್ಯ 8:1

ಜನರೆಲ್ಲರು ಏಕವಾಗಿ ನೀರು ಬಾಗಲಿಗೆ ಎದುರಾಗಿರುವ ಬೀದಿಯಲ್ಲಿ ಕೊಡಿ ಕೊಂಡು ಕರ್ತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ ಮೋಶೆಯ ನ್ಯಾಯ ಪ್ರಮಾಣದ ಪುಸ್ತಕವನ್ನು ತಕ್ಕೊಂಡು ಬರಲು ಶಾಸ್ತ್ರಿಯಾದ ಎಜ್ರನಿಗೆ ಹೇಳಿದರು.

ನೆಹೆಮ್ಯ 8:3

ಎಜ್ರನು ನ್ಯಾಯ ಪ್ರಮಾಣವನ್ನು ತಕ್ಕೊಂಡು ಬಂದು ನೀರಿನ ಬಾಗಲ ಮುಂಭಾಗದಲ್ಲಿರುವ ಬೀದಿಯಲ್ಲಿ ಸ್ತ್ರೀ ಪುರುಷರ ಮುಂದೆಯೂ ಗ್ರಹಿಕೆಯುಳ್ಳ ಎಲ್ಲರ ಮುಂದೆಯೂ ಬೆಳಗಿನಿಂದ ಮಧ್ಯಾಹ್ನದ ವರೆಗೆ ಓದಿದನು. ಜನರೆ ಲ್ಲರೂ ನ್ಯಾಯಪ್ರಮಾಣಕ್ಕೆ ಕಿವಿಗೊಟ್ಟರು.

ನೆಹೆಮ್ಯ 12:37

ತಮಗೆ ಎದುರಾದ ಬಾವಿಯ ಬಾಗಲಿಗೆ ಬಂದಾಗ ಗೋಡೆಯಲ್ಲಿ ಎತ್ತರವಾದ ದಾವೀದನ ಪಟ್ಟಣದ ಮೆಟ್ಟಲುಗಳಿಂದ ದಾವೀದನ ಮನೆಯ ಮೇಲೆ ಮೂಡಣದ ಕಡೆಗಿರುವ ನೀರಿನ ಬಾಗಲಿಗೆ ಹೋದರು.

ನೆಹೆಮ್ಯ 12:39

ಎಫ್ರಾಯಾಮಿನ ಬಾಗಲ ಮೇಲೆಯೂ ಹಳೇ ಬಾಗಲ ಮೇಲೇಯೂ ವಿಾನಿನ ಬಾಗಲ ಮೇಲೆಯೂ ಹಾದು ಹನನೇಲನ ಗೋಪುರವನ್ನೂ ಹಮ್ಮೋಯಾ ಗೋಪುರವನ್ನೂ ದಾಟಿ ಕುರಿಬಾಗಲ ವರೆಗೆ ಬಂದು ಸೆರೆಮನೆಯ ಬಾಗಲ ಬಳಿಯಲ್ಲಿ ನಿಂತರು.

ಯೆರೆಮಿಯ 19:13

ಕರ್ತನಿಗೆ ಹಾಡಿರಿ; ಕರ್ತನನ್ನು ಸ್ತುತಿ ಸಿರಿ; ಆತನು ಬಡವನ ಪ್ರಾಣವನ್ನು ಕೇಡು ಮಾಡುವ ವರ ಕೈಯಿಂದ ತಪ್ಪಿಸಿದ್ದಾನೆ.

Interlinear

Choose Theme