ಇವರ ತರುವಾಯ ಗಿಬ್ಯೋನು ಮಿಚ್ಛೆ ಎಂಬ ಊರುಗಳ ಮನುಷ್ಯರಾದ ಗಿಬ್ಯೋನಿಯನಾದ ಮೆಲೆಟ್ಯನೂ ಮೇರೋನೋತಿನವನಾದ ಯಾದೋನನೂ ನದಿಯ ಈಚೆಯಲ್ಲಿರುವ ಅಧಿಪತಿಯ ಪೀಠದ ವರೆಗೂ ಭದ್ರ ಪಡಿಸಿದರು.
Cross references
ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ
ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
ಒಂಟೆಗಳ ಮೇಲೆ ಇರುವವನು ಇಷ್ಮಾ ಯೇಲ್ಯನಾದ ಓಬೀಲನು; ಕತ್ತೆಗಳ ಮೇಲೆ ಇರುವ ವನು ಮೇರೊನೋತಿನವನಾದ ಯೆಹ್ದೆಯನು.
ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡುಹೋದನು. ಬಾಷನು ಕಟ್ಟಿಸುತ್ತಿದ್ದ ರಾಮದ ಕಲ್ಲುಗಳನ್ನೂ ಅದರ ತೊಲೆಗಳನ್ನೂ ತಕ್ಕೊಂಡು ಹೋದರು; ಅವುಗಳಿಂದ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.
ಇದಲ್ಲದೆ ನಾನು ಅರಸನಿಗೆ--ಅರಸನಿಗೆ ಸಮ್ಮತಿಸಿದರೆ ನಾನು ಯೆಹೂದಕ್ಕೆ ಹೋಗಿ ಸೇರುವ ತನಕ ನದಿಯ ಆಚೆಯಲ್ಲಿ ಇರುವ ಅಧಿಪತಿಗಳು ನನ್ನನ್ನು ಸಾಗಕಳುಹಿಸುವ ಹಾಗೆ ಅವರಿಗೋಸ್ಕರ ನನಗೆ ಪತ್ರಗಳು ಕೊಡಲ್ಪಡಲಿ.
ಇವನ ತರು ವಾಯ ಮಿಚ್ಪದ ಅಧಿಪತಿಯಾದ ಯೇಷೂವನ ಮಗ ನಾದ ಏಜ್ರನು ಮೂಲೆಯಲ್ಲಿ ಆಯುಧ ಶಾಲೆಗೆ ಹೋಗುವ ಸ್ಥಳಕ್ಕೆ ಎದುರಾಗಿ ಮತ್ತೊಂದು ಪಾಲನ್ನು ಭದ್ರಪಡಿಸಿದನು.