Home Bibles ☰ Books ಎಜ್ರಾ 8:36 · ಕನ್ನಡ ಬೈಬಲ್
ಎಜ್ರಾ 8:36 · ಕನ್ನಡ ಬೈಬಲ್

ಅವರು ಅರಸನ ಆಜ್ಞೆಗಳನ್ನು ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ ಯಜಮಾ ನರಿಗೂ ಒಪ್ಪಿಸಿದರು. ಆಗ ಅವರ ಜನರಿಗೂ ದೇವರ ಆಲಯಕ್ಕೂ ಸಹಾಯಮಾಡಿದರು.

Cross references

ಎಜ್ರಾ 4:7

ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು.

ಎಜ್ರಾ 5:6

ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆ ನೈಯೂ ಶೆತರ್ಬೋಜೆನೈಯೂ ನದಿಯ ಈಚೆಯ ಲ್ಲಿರುವ ಅಪರ್ಸತ್ಕಾಯರಾದ ಅವನ ಜೊತೆಗಾರರೂ ಅರಸನಾದ ದಾರ್ಯಾವೆಷನಿಗೆ ಬರೆದು ಕಳುಹಿಸಿದ ಪತ್ರದ ಪ್ರತಿ.

ಎಜ್ರಾ 6:13

ಆಗ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಅವರ ಜೊತೆ ಗಾರರೂ ಅರಸನಾದ ದಾರ್ಯಾವೆಷನು ಕಳುಹಿ ಸಿದ ಆಜ್ಞೆಯ ಪ್ರಕಾರ ತ್ವರೆಯಾಗಿ ಮಾಡಿದರು.

ಎಜ್ರಾ 7:21

ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ--

ಎಸ್ತೇರ್ 9:3

ಇದಲ್ಲದೆ ಪ್ರಾಂತ್ಯಗಳ ಅಧಿಕಾರಿಗಳೂ ಪ್ರತಿನಿಧಿಗಳೂ ಅಧಿಪತಿ ಗಳೂ ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಯಾಕಂದರೆ ಮೊರ್ದೆ ಕೈಯ ಭಯ ಅವರಿಗೆ ಇದ್ದಿತು.

ಸಾಮೇತಿಗಳು 16:7

ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನ ದಲ್ಲಿರುವಂತೆ ಆತನು ಮಾಡುತ್ತಾನೆ.

ಯೆಶಾಯ 56:6

ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್‌ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ

ಅಪೋಸ್ತಲರ ಕೃತ್ಯಗಳು 18:27

ಅವನು ಅಖಾಯಕ್ಕೆ ಹೋಗಬೇಕೆಂದು ಮನಸ್ಸು ಮಾಡಿದಾಗ ಅಲ್ಲಿದ್ದ ಶಿಷ್ಯರು ಅವನನ್ನು ಸೇರಿಸಿಕೊಳ್ಳಬೇಕೆಂದು ಪ್ರೋತ್ಸಾಹ ಮಾಡಿ ಸಹೋದರರು ಅವರಿಗೆ ಬರೆದರು; ಅವನು ಅಲ್ಲಿಗೆ ಬಂದು ಕೃಪೆಯಿಂದ ನಂಬಿದ್ದವರಿಗೆ ಹೆಚ್ಚಾಗಿ ಸಹಾಯ ಮಾಡಿದನು;ಹೇಗಂದರೆ ಯೇಸುವೇ ಕ್ರಿಸ್ತನೆಂದು ಅವನು ಬರಹಗಳಿಂದ ತೋರಿಸಿ ಬಹಿ ರಂಗದಲ್ಲಿ ಯೆಹೂದ್ಯರು ಬಲವಾಗಿ ಒಪ್ಪಿಕೊಳ್ಳುವಂತೆ ಮಾಡಿದನು.

ಪ್ರಕಟನೆ 12:16

ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ಪ್ರವಾಹವನ್ನು ಕುಡಿದುಬಿಟ್ಟಿತು.ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸು ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟನು.

Interlinear

Choose Theme