Home Bibles ನೆಹೆಮ್ಯ 12:40 · ಕನ್ನಡ ಬೈಬಲ್
ನೆಹೆಮ್ಯ 12:40 · ಕನ್ನಡ ಬೈಬಲ್

ತರುವಾಯ ಸ್ತುತಿಮಾಡುವ ಎರಡು ಗುಂಪು ಗಳೂ ನಾನೂ ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಸ್ತರೂ ದೇವರ ಆಲಯದಲ್ಲಿ ನಿಂತಿದ್ದೆವು.

Cross references

ನೆಹೆಮ್ಯ 12:31

ಆಗ ನಾನು ಯೆಹೂದದ ಪ್ರಧಾನರನ್ನು ಗೋಡೆಯ ಮೇಲೆ ಬರಮಾಡಿ ಸ್ತುತಿಸಲು ಎರಡು ದೊಡ್ಡ ಗುಂಪುಗಳನ್ನು ನೇಮಿಸಿದೆನು; ಒಂದು ಗುಂಪಿ ನವರು ಗೋಡೆಯ ಮೇಲೆ ಬಲಗಡೆಯಿಂದ ತಿಪ್ಪೆ ಬಾಗಲ ಕಡೆಗೆ ಹೋದರು.

ಕೀರ್ತನೆಗಳು 42:4

ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.

ಕೀರ್ತನೆಗಳು 47:6

ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ;

ಕೀರ್ತನೆಗಳು 134:1

ಇಗೋ, ಕರ್ತನ ಆಲಯದಲ್ಲಿ ಪ್ರತಿ ರಾತ್ರಿ ನಿಲ್ಲುವವರಾದ ಕರ್ತನ ಸೇವಕರೆ ಎಲ್ಲಾ ಕರ್ತನನ್ನು ಸ್ತುತಿಸಿರಿ.

Interlinear

Choose Theme