Home Bibles ನೆಹೆಮ್ಯ 1:6 · ಕನ್ನಡ ಬೈಬಲ್
ನೆಹೆಮ್ಯ 1:6 · ಕನ್ನಡ ಬೈಬಲ್

ನಿನ್ನ ಸೇವಕರಾದ ಇಸ್ರಾಯೇಲ್‌ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್‌ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ.

Cross references

1 ಸಮುವೇಲ 15:11

ಅವನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ಹಿಂದಕ್ಕೆ ಹೋದನು; ನನ್ನ ಆಜ್ಞೆಗಳನ್ನು ಈಡೇರಿಸಲಿಲ್ಲ ಅಂದನು. ಅದಕ್ಕೆ ಸಮುವೇಲನು ದುಃಖಪಟ್ಟವನಾಗಿ ರಾತ್ರಿಯೆಲ್ಲಾ ಕರ್ತನಿಗೆ ಮೊರೆಯಿಟ್ಟನು.

1 ಅರಸುಗಳು 8:28

ಆದರೆ ನನ್ನ ದೇವರಾದ ಕರ್ತನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನೂ ಕೇಳು.

1 ಅರಸುಗಳು 8:29

ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರಿರುವದೆಂದು ನೀನು ಹೇಳಿದ ಸ್ಥಳವಾದ ಈ ಮಂದಿರದ ಮೇಲೆ ರಾತ್ರಿ ಹಗಲು ನಿನ್ನ ಕಟಾಕ್ಷವಿರಲಿ.

2 ದಿನವೃತ್ತಾಂತ 6:40

ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿನ್ನ ಕಣ್ಣುಗಳು ತೆರೆದಿರಲಿ, ನಿನ್ನ ಕಿವಿಗಳು ಆಲೈಸುತ್ತಾ ಇರಲಿ.

2 ದಿನವೃತ್ತಾಂತ 28:10

ಈಗ ನಿಮಗೆ ದಾಸರೂ ದಾಸಿಗಳೂ ಆಗಿರುವ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ಮಕ್ಕಳನ್ನೂ ನಿಮ್ಮ ವಶಮಾಡಬೇಕೆಂದು ಅಂದುಕೊಳ್ಳುತ್ತೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಗಳು ಇಲ್ಲವೋ?

2 ದಿನವೃತ್ತಾಂತ 29:6

ನಮ್ಮ ಪಿತೃಗಳು ಅಪರಾಧಮಾಡಿ ನಮ್ಮ ದೇವರಾದ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ ಆತನನ್ನು ಬಿಟ್ಟು ಕರ್ತನ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ.

ಎಜ್ರಾ 9:6

ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು.

ಎಜ್ರಾ 10:1

ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅಳುತ್ತಾ ದೇವರ ಆಲಯದ ಮುಂದೆ ಬಿದ್ದಿರಲು ಇಸ್ರಾಯೇಲ್ಯರಲ್ಲಿ ಸ್ತ್ರೀಯರೂ ಪುರುಷರೂ ಮಕ್ಕಳೂ ಮಹಾ ದೊಡ್ಡ ಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡರು. ಜನರು ಬಹಳವಾಗಿ ಅತ್ತರು.

ಎಜ್ರಾ 10:11

ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.

ಕೀರ್ತನೆಗಳು 32:5

ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ.

ಕೀರ್ತನೆಗಳು 34:15

ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.

ಕೀರ್ತನೆಗಳು 55:17

ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.

ಕೀರ್ತನೆಗಳು 88:1

ನನ್ನ ರಕ್ಷಣೆಯ ದೇವರಾದ ಓ ಕರ್ತನೇ, ಹಗಲಿರುಳು ನಿನ್ನ ಮುಂದೆ ಕೂಗುತ್ತೇನೆ.

ಕೀರ್ತನೆಗಳು 106:6

ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.

ಕೀರ್ತನೆಗಳು 130:2

ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.

ಯೆಶಾಯ 6:5

ಆಗ ನಾನು--ಅಯ್ಯೋ, ನಾನು ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು, ನಾನು ಹೊಲಸು ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು; ಆದರೂ ಸೈನ್ಯಗಳ ಕರ್ತನಾದ ಅರಸನನ್ನು ನನ್ನ ಕಣ್ಣುಗಳು ಕಂಡವಲ್ಲಾ ಅಂದೆನು.

ಯೆಶಾಯ 64:6

ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.

ವಿಲಾಪಗಳು 3:39

ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?

ವಿಲಾಪಗಳು 5:7

ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.

ದಾನಿಯೇಲ 9:4

ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ,

ದಾನಿಯೇಲ 9:5

ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.

ದಾನಿಯೇಲ 9:8

ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.

ದಾನಿಯೇಲ 9:15

ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ.

ದಾನಿಯೇಲ 9:17

ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.

ದಾನಿಯೇಲ 9:20

ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.

ಲೂಕ 2:37

ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು.

ಲೂಕ 18:7

ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?

ಎಫೆಸದವರಿಗೆ 2:3

ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.

1 ತಿಮೋಥೆಯ 5:5

ನಿಜವಾಗಿಯೂ ದಿಕ್ಕಿಲ್ಲದ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.

2 ತಿಮೋಥೆಯ 1:3

ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಕ ಮಾಡುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕ ರನ್ನು ಅನುಸರಿಸಿ ದೇವರನ್ನು ಸೇವಿಸಿ ಸ್ತೋತ್ರ ಸಲ್ಲಿಸು ತ್ತೇನೆ.

1 ಯೋಹಾನ 1:9

ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿಲ್ಲ.

Interlinear

Choose Theme