ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.
Cross references
ಅವರು ಸೆರೆ ಒಯ್ಯಲ್ಪಟ್ಟ ದೇಶದಲ್ಲಿ ಪಶ್ಚಾತ್ತಾಪಪಟ್ಟು ತಿರುಗಿ ಕೊಂಡು ತಾವು ಪಾಪಮಾಡಿ ವಕ್ರಬುದ್ಧಿಯಿಂದ ನಡೆದು ದ್ರೋಹಮಾಡಿದೆವೆಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ವಿಜ್ಞಾಪನೆಮಾಡಿ ಅವರನ್ನು ಸೆರೆಯಾಗಿ ಒಯ್ದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ
ಅವರು ತಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ ಆತನ ಒಡಂಬಡಿಕೆಯನ್ನೂ ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಎಲ್ಲ ವನ್ನೂ ವಿಾರಿದರು; ಅವುಗಳನ್ನು ಕೇಳದೆಯೂ ಮಾಡ ದೆಯೂ ಹೋದರು.
ಅವರ ತಂದೆಗಳು ಐಗುಪ್ತ ದಿಂದ ಹೊರಟ ದಿವಸ ಮೊದಲುಗೊಂಡು ಇಂದಿನ ವರೆಗೂ ಅವರು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ.
ನೀನು ಅವರನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿರಲಾಗಿ ಅವರು ಸೆರೆಯಾಗಿ ಒಯ್ಯಲ್ಪಟ್ಟ ದೇಶದಲ್ಲಿ ಮನಸ್ಸು ತಿರಿಗಿಸಿ ಪಶ್ಚಾತ್ತಾಪ ಪಟ್ಟು--ನಾವು ಪಾಪಮಾಡಿದ್ದೇವೆ, ಅಕೃತ್ಯಮಾಡಿ ದುಷ್ಟರಾಗಿ ನಡೆದಿದ್ದೇವೆ ಎಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ಪ್ರಾರ್ಥನೆ ಮಾಡಿ
ನನ್ನ ದೇವರೇ, ನಾನು ನನ್ನ ಮುಖವನ್ನು ನಿನ್ನ ಮುಂದೆ ಎತ್ತುವಹಾಗೆ ಲಜ್ಜೆಯಿಂದ ನಾಚಿಕೆಪಡು ತ್ತೇನೆ. ನನ್ನ ದೇವರೇ, ನಮ್ಮ ಅಕ್ರಮಗಳು ನಮ್ಮ ತಲೆಯ ಮೇಲೆ ಹೆಚ್ಚಿದವು; ನಮ್ಮ ಅಪರಾಧವು ಆಕಾಶದ ಪರ್ಯಂತರ ಬೆಳೆಯಿತು.
ನಿನ್ನ ಸೇವಕರಾದ ಇಸ್ರಾಯೇಲ್ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ.
ಆದರೆ ನೀನು ನಮ್ಮ ಮೇಲೆ ಬರಮಾಡಿದ ಎಲ್ಲಾದರಲ್ಲಿ ನೀತಿಪರನಾಗಿದ್ದಿ. ಯಾಕಂದರೆ ನೀನು ಮಾಡಿದ್ದು ಸತ್ಯವಾದದ್ದು; ಆದರೆ ನಾವು ದುಷ್ಟರಾಗಿ ನಡೆದೆವು.
ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.
ನಿನ್ನ ನ್ಯಾಯವಿಧಿಗಳಿಂದ ನಾನು ತೊಲಗಲಿಲ್ಲ; ನೀನು ನನ್ನನ್ನು ಬೋಧಿಸಿದ್ದೀ.
ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ.
ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
ಸಂತೋಷಪಟ್ಟು ನೀತಿಯನ್ನು ಕೈಕೊಳ್ಳುವವನನ್ನೂ ನಿನ್ನ ಮಾರ್ಗಗಳಲ್ಲಿ ನಿನ್ನನ್ನು ಜ್ಞಾಪಕಮಾಡುವವ ನನ್ನೂ ನೀನು ಎದುರುಗೊಳ್ಳುತ್ತೀ; ಇಗೋ, ನೀನು ರೌದ್ರನಾಗಿರುವಿ, ಯಾಕಂದರೆ ನಾವು ರಕ್ಷಿಸಲ್ಪಡದ ಹಾಗೆ ಪಾಪದಲ್ಲಿ ಮುಂದುವರಿದೆವು.
ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ; ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ; ನಾವೂ ನಮ್ಮ ತಂದೆಗಳೂ ನಮ್ಮ ಯೌವನದಾರಭ್ಯ ಇಂದಿನವರೆಗೂ ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ನಮ್ಮ ದೇವ ರಾದ ಕರ್ತನ ಸ್ವರಕ್ಕೆ ಕಿವಿಗೊಡಲಿಲ್ಲ.
ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ತೂರುವೆನು; ನನ್ನ ಜನರನ್ನು ಮಕ್ಕಳಿಲ್ಲದವರಾಗ ಮಾಡಿ ನಾಶಮಾಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು ಹಿಂತಿರುಗದೆ ಇದ್ದದರಿಂದ
ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
ಓ ಕರ್ತನೇ, ನೋಡು; ನಾನು ಇಕ್ಕಟ್ಟಿನಲ್ಲಿದ್ದೇನೆ. ನನ್ನ ಕರುಳುಗಳು ನನ್ನ ಹೃದಯವು ಮಗಚಿಕೊಂಡಿದೆ. ನಾನು ಘೋರವಾಗಿ ತಿರುಗಿಬಿದ್ದಿದ್ದೇನೆ. ಹೊರಗೆ ಕತ್ತಿ ಯಿಂದ ಸಂಹಾರ, ಮನೆಯೊಳಗೆ ಮರಣ.
ನಾವು ದ್ರೋಹಮಾಡಿ ಎದುರು ಬಿದ್ದಿದ್ದೇವೆ; ನೀನು ಮನ್ನಿಸಲಿಲ್ಲ.
ಆಕೆಯು (ಅದು) ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತ್ವಕ್ಕೆ ತಿರುಗಿಸಿ ಬಿಟ್ಟಳು. ಅವರು ನನ್ನ ನ್ಯಾಯಗಳನ್ನು ನಿಯಮಗಳನ್ನು ಅನುಸರಿಸದೆ ನಿರಾಕರಿಸಿದ್ದಾರೆ.
ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.
ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
ಹೊಶೇಯನಿಂದಾದ ಕರ್ತನ ವಾಕ್ಯದ ಪ್ರಾರಂ ಭವು: ಕರ್ತನು ಹೊಶೇಯನಿಗೆ ಹೇಳಿದ್ದೇನಂದರೆ --ಹೋಗಿ ನಿನಗೆ ವ್ಯಭಿಚಾರಿಣಿಗಳ ಹೆಂಡತಿಯನ್ನೂ ವ್ಯಭಿಚಾರಿಣಿಗಳ ಮಕ್ಕಳನ್ನೂ ತೆಗೆದುಕೊ; ದೇಶವು ಕರ್ತನನ್ನು ಬಿಟ್ಟು ದೊಡ್ಡ ವ್ಯಭಿಚಾರತನವನ್ನು ಮಾಡಿಕೊಂಡಿದೆ.
ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮ ಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಕೈಕೊಳ್ಳಲಿಲ್ಲ; ನನ್ನ ಬಳಿಗೆ ತಿರುಗಿಕೊಳ್ಳಿರಿ; ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ; ಆದರೆ ನೀವು--ಯಾವದರಲ್ಲಿ ತಿರುಗಿಕೊಳ್ಳೋಣ ಎಂದು ಹೇಳುತ್ತೀರಿ.
ಸಹೋದರರೇ, ಎಚ್ಚರಿಕೆಯಿಂದ ನೋಡಿಕೊ ಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು.