Home Bibles ಮತ್ತಾಯ 9:23 · ಕನ್ನಡ ಬೈಬಲ್
ಮತ್ತಾಯ 9:23 · ಕನ್ನಡ ಬೈಬಲ್

ತರುವಾಯ ಯೇಸು ಆ ಅಧಿಕಾರಿಯ ಮನೆ ಯೊಳಗೆ ಬಂದು ಕೊಳಲೂದುವವರನ್ನೂ ಗೊಂದಲ ಮಾಡುವ ಜನರನ್ನೂ ನೋಡಿ

Cross references

2 ದಿನವೃತ್ತಾಂತ 35:25

ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

ಯೆರೆಮಿಯ 9:17

ಕೋಟೆಯಲ್ಲಿ ವಾಸವಾಗಿರುವವನೇ, ದೇಶದೊಳ ಗಿಂದ ನಿನ್ನ ಸರಕುಗಳನ್ನು ಕೂಡಿಸು.

ಮತ್ತಾಯ 9:18

ಆತನು ಈ ವಿಷಯಗಳನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ ಇಗೋ, ಒಬ್ಬ ಅಧಿಕಾರಿಯು ಬಂದು ಆತನನ್ನು ಆರಾಧಿಸಿ--ನನ್ನ ಮಗಳು ಇದೀಗಲೇ ಸತ್ತು ಹೋಗಿರುವಳು; ಆದರೆ ನೀನು ಬಂದು ಆಕೆಯ ಮೇಲೆ ನಿನ್ನ ಕೈಯನ್ನಿಡು; ಆಗ ಅವಳು ಬದುಕುವಳು ಎಂದು ಹೇಳಿದನು.

ಮತ್ತಾಯ 11:17

ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.

ಮಾರ್ಕ 5:35

ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.

ಲೂಕ 7:32

ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ.

ಲೂಕ 8:49

ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆ--ನಿನ್ನ ಮಗಳು ಸತ್ತಿದ್ದಾಳೆ, ಬೋಧಕನಿಗೆ ತೊಂದರೆ ಕೊಡಬೇಡ ಅಂದನು.

ಅಪೋಸ್ತಲರ ಕೃತ್ಯಗಳು 9:39

ಪೇತ್ರನು ಎದು ಅವರ ಜೊತೆಯಲ್ಲಿ ಹೋದನು. ಅವನು ಬಂದಾಗ ಅವರು ಅವನನ್ನು ಮೇಲಂತಸ್ತಿನ ಕೊಠಡಿಗೆ ಕರೆದು ಕೊಂಡುಹೋದರು. ಅಲ್ಲಿ ವಿಧವೆಯರೆಲ್ಲರೂ ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಮೇಲಂಗಿಗಳನ್ನೂ ಒಳಂಗಿಗಳನ್ನೂ ತೋರಿಸಿ

Interlinear

Choose Theme