ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು.
Cross references
ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು, ಕಚ್ಚುವಿ ಅಂದನು.
ನಾನು ನಿನ್ನನ್ನು ಬಿಟ್ಟು ಹೋಗುವಾಗ ಆಗುವದೇನಂದರೆ, ಕರ್ತನ ಆತ್ಮನು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯು ವನು. ನಾನು ಬಂದು ಅಹಾಬನಿಗೆ ತಿಳಿಸಿದಾಗ ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕು ವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕತನ ದಿಂದ ಕರ್ತನಿಗೆ ಭಯಪಡುತ್ತೇನೆ.
ಇದ ಲ್ಲದೆ ಅವರು ಅವನಿಗೆ--ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ; ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಯಾಗಲಿ, ಒಂದು ವೇಳೆ ಕರ್ತನ ಆತ್ಮನು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ ತಗ್ಗಿನ ಲ್ಲಾದರೂ ಹಾಕಿರಬಹುದು ಅಂದರು.
ಆಮೇಲೆ ಆತ್ಮನು ನನ್ನನ್ನು ಮೇಲೆ ತೆಗೆದುಕೊಂಡು ಹೋದನು. ನಾನು--ಕರ್ತನ ಮಹಿಮೆ ತನ್ನ ಸ್ಥಳ ದೊಳಗಿಂದ ಹರಸಲ್ಪಡಲೆಂದು ಘೋಷಿಸುವ ಒಂದು ಮಹಾಧ್ವನಿಯು ನನ್ನ ಹಿಂದೆ ನುಗ್ಗಿಕೊಂಡು ಬರುವ ದನ್ನು ನಾನು ಕೇಳಿಸಿಕೊಂಡೆನು.
ಹೀಗೆ ಆತ್ಮನು ನನ್ನನ್ನು ಎತ್ತಿಕೊಂಡು ಹೋದನು; ನಾನು ಕಹಿಯಲ್ಲಿಯೂ ಆತ್ಮನ ಉರಿಯ ಲ್ಲಿಯೂ ಹೋದೆನು; ಅದರೆ ಕರ್ತನ ಕೈ ನನ್ನ ಮೇಲೆ ಬಲವಾಗಿತ್ತು.
ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿ ದನು; ಆಗ ಆತ್ಮನು ನನ್ನನ್ನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ಎತ್ತಿ ನನ್ನನ್ನು ದೇವರದರ್ಶನಗಳಲ್ಲಿ ಯೆರೂ ಸಲೇಮಿಗೆ ಉತ್ತರದ ಕಡೆಗೆ ಎದುರಾಗಿರುವ ಒಳ ಬಾಗಲಿನ ಕಡೆಗೆ ಅಸೂಯೆ ಎಬ್ಬಿಸುವ ವಿಗ್ರಹವು ಇದ್ದಲ್ಲಿಗೆ ತೆಗೆದುಕೊಂಡು ಹೋದನು.
ಇದಲ್ಲದೆ ಆತ್ಮನು ನನ್ನನ್ನು ಎತ್ತಿ ಕರ್ತನ ಆಲಯದ ಪೂರ್ವಬಾಗಲಿಗೆ ಮೂಡಣದಿಕ್ಕಿಗೆ ಅಭಿಮುಖವಾಗಿರುವ ಕಡೆಗೆ ತೆಗೆದುಕೊಂಡು ಹೋದನು. ಆಗ ಇಗೋ, ಬಾಗಲಿನ ಮುಂದೆ ಇಪ್ಪತ್ತೈದು ಮಂದಿ ಮನುಷ್ಯರು; ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗನಾದ ಯಾಜನ್ಯ ನನ್ನೂ ಬೆನಾಯನ ಮಗನಾದ ಪೆಲತ್ಯನನ್ನೂ ನೋಡಿ ದೆನು.
ಅನಂತರ ಆತ್ಮನು ನನ್ನನ್ನು ಎತ್ತಿ ದೇವರ ಆತ್ಮದಿಂದಾದ ದರ್ಶನದಿಂದ ಕಸ್ದೀಯರ ದೇಶಕ್ಕೆ ಸೆರೆಯವರ ಬಳಿಗೆ ಕರೆದುಕೊಂಡು ಹೋದನು; ಆಗ ನಾನು ನೋಡಿದ ದರ್ಶನವು ನನ್ನಿಂದ ಇಲ್ಲದೆ ಹೋಯಿತು.ಆಮೇಲೆ ಕರ್ತನು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯವರೊಂದಿಗೆ ನಾನು ಮಾತನಾಡಿದೆನು.
ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆ ತಂದಿತು; ಇಗೋ, ಕರ್ತನ ಮಹಿಮೆ ಯಿಂದ ಆಲಯವು ತುಂಬಿಕೊಂಡಿತ್ತು.
ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
ಯೇಸು ಪರಿಶುದ್ಧಾತ್ಮನಿಂದ ತುಂಬಿದವನಾಗಿ ಯೊರ್ದನಿನಿಂದ ಹಿಂತಿರುಗಿ ಬಂದು ಆತ್ಮ ನಿಂದ ಅಡವಿಯೊಳಕ್ಕೆ ನಡಿಸಲ್ಪಟ್ಟು
ಇನ್ನು ಮೇಲೆ ನಾನು ನಿಮ್ಮೊಂದಿಗೆ ಬಹಳವಾಗಿ ಮಾತನಾಡುವದಿಲ್ಲ; ಯಾಕಂದರೆ ಇಹ ಲೋಕದ ಅಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ನನ್ನಲ್ಲಿ ಏನೂ ಇಲ್ಲ.ನಾನು ತಂದೆಯನ್ನು ಪ್ರೀತಿಮಾಡುತ್ತೇನೆಂದು ಲೋಕವು ತಿಳಿಯುವ ಹಾಗೆ ತಂದೆಯು ನನಗೆ ಆಜ್ಞೆ ಕೊಟ್ಟಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ ಅಂದನು.
ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮನು ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಕಂಚುಕಿಯು ಅವನನ್ನು ಕಾಣಲೇಇಲ್ಲ. ಅವನು ತನ್ನ ದಾರಿ ಹಿಡಿದು ಸಂತೋಷವುಳ್ಳವನಾಗಿ ಹೋದನು.ತರುವಾಯ ಫಿಲಿಪ್ಪನು ಅಜೋತಿನಲ್ಲಿ ಕಾಣಿಸಿ ಕೊಂಡು ಅಲ್ಲಿಂದ ಕೈಸರೈಯಕ್ಕೆ ಬರುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.
ಯಾಕಂದರೆ ಯಾರಾರು ದೇವರ ಆತ್ಮನಿಂದ ನಡಿಸಲ್ಪಡುತ್ತಾರೋ ಅವರು ದೇವರ ಪುತ್ರರಾಗಿದ್ದಾರೆ.
ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.
ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.