ಮತ್ತಾಯ 26:50 · ಕನ್ನಡ ಬೈಬಲ್
ಅದಕ್ಕೆ ಯೇಸು ಅವನಿಗೆ--ಸ್ನೇಹಿತನೇ, ನೀನು ಯಾಕೆ ಬಂದಿರುತ್ತೀ ಎಂದು ಕೇಳಿದನು; ಆಗ ಅವರು ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
Cross references
2 ಸಮುವೇಲ 16:17
ಅಬ್ಷಾಲೋಮನು ಅವನಿಗೆ--ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು.
ಕೀರ್ತನೆಗಳು 41:9
ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.
ಕೀರ್ತನೆಗಳು 55:13
ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ.
ಮತ್ತಾಯ 20:13
ಆದರೆ ಅವನು ಅವರಲ್ಲಿ ಒಬ್ಬನಿಗೆ ಪ್ರತ್ಯುತ್ತರವಾಗಿ--ಸ್ನೇಹಿ ತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ಒಂದು ಪಾವಲಿಗೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳ ಲಿಲ್ಲವೇ?
ಮತ್ತಾಯ 22:12
ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.
ಲೂಕ 22:48
ಆದರೆ ಯೇಸು ಅವನಿಗೆ-- ಯೂದನೇ, ಮುದ್ದಿನಿಂದ ಮನುಷ್ಯಕುಮಾರನನ್ನು ಹಿಡುಕೊಡುತ್ತೀಯೋ ಅಂದನು.