Home Bibles ಲೂಕ 22:48 · ಕನ್ನಡ ಬೈಬಲ್
ಲೂಕ 22:48 · ಕನ್ನಡ ಬೈಬಲ್

ಆದರೆ ಯೇಸು ಅವನಿಗೆ-- ಯೂದನೇ, ಮುದ್ದಿನಿಂದ ಮನುಷ್ಯಕುಮಾರನನ್ನು ಹಿಡುಕೊಡುತ್ತೀಯೋ ಅಂದನು.

Cross references

2 ಸಮುವೇಲ 20:9

ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು.

ಕೀರ್ತನೆಗಳು 55:21

ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.

ಸಾಮೇತಿಗಳು 27:6

ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.

ಮತ್ತಾಯ 26:48

ಆತನನ್ನು ಹಿಡು ಕೊಡುವದಕ್ಕಿದ್ದವನು ಅವರಿಗೆ--ನಾನು ಯಾವಾತನಿಗೆ ಮುದ್ದಿಡುತ್ತೇನೋ ಅವನೇ ಆತನು. ಆತನನ್ನು ಗಟ್ಟಿ ಯಾಗಿ ಹಿಡಿಯಿರಿ ಎಂದು ಗುರುತನ್ನು ಹೇಳಿದ್ದನು.

ಮಾರ್ಕ 14:44

ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ--ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಆತನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.

Interlinear

Choose Theme