Home Bibles ಮತ್ತಾಯ 26:47 · ಕನ್ನಡ ಬೈಬಲ್
ಮತ್ತಾಯ 26:47 · ಕನ್ನಡ ಬೈಬಲ್

ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.

Cross references

ಮತ್ತಾಯ 26:14

ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತ್‌ ಎಂಬವನು ಪ್ರಧಾನ ಯಾಜಕರ ಬಳಿಗೆ ಹೋಗಿ--

ಮತ್ತಾಯ 26:55

ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;

ಮಾರ್ಕ 14:43

ಆತನು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆ ರಡು ಮಂದಿಯಲ್ಲಿ ಒಬ್ಬನಾದ ಯೂದನು ಬಂದನು; ಪ್ರಧಾನ ಯಾಜಕರ ಶಾಸ್ತ್ರಿಗಳ ಮತ್ತು ಹಿರಿಯರ ಕಡೆ ಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಅವನ ಕೂಡ ಬಂದರು.

ಲೂಕ 22:47

ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಸಮೂಹವು ಮತ್ತು ಹನ್ನೆರಡು ಮಂದಿಯಲ್ಲಿ ಯೂದ ನೆಂದು ಕರೆಯಲ್ಪಟ್ಟ ಒಬ್ಬನು ಅವರ ಮುಂದೆ ಹೋಗುತ್ತಾ ಯೇಸುವಿಗೆ ಮುದ್ದಿಡುವದಕ್ಕಾಗಿ ಆತನನ್ನು ಸವಿಾಪಿಸಿದನು.

ಯೋಹಾನ 18:1

ಯೇಸು ಈ ಮಾತುಗಳನ್ನು ಆಡಿದ ಮೇಲೆ ತನ್ನ ಶಿಷ್ಯರೊಂದಿಗೆ ಕೆದ್ರೋನ್‌ ಹಳ್ಳದ ಆಚೆಗೆ ಹೋದನು. ಅಲ್ಲಿ ಒಂದು ತೋಟ ವಿತ್ತು, ಆತನೂ ಆತನ ಶಿಷ್ಯರೂ ಅದರೊಳಗೆ ಪ್ರವೇಶಿ ಸಿದರು.

ಅಪೋಸ್ತಲರ ಕೃತ್ಯಗಳು 1:16

ಜನರೇ, ಸಹೋದ ರರೇ, ಯೇಸುವನ್ನು ಹಿಡಿದವರಿಗೆ ದಾರಿ ತೋರಿಸಿದ ಯೂದನ ವಿಷಯವಾಗಿ ಮೊದಲು ದಾವೀದನ ಬಾಯಿಂದ ಪವಿತ್ರಾತ್ಮನು ಹೇಳಿದ್ದ ಬರಹವು ನೆರ ವೇರುವದು ಅವಶ್ಯವಾಗಿತ್ತು.

Interlinear

Choose Theme