Home Bibles ಯೋಹಾನ 18:1 · ಕನ್ನಡ ಬೈಬಲ್
ಯೋಹಾನ 18:1 · ಕನ್ನಡ ಬೈಬಲ್

ಯೇಸು ಈ ಮಾತುಗಳನ್ನು ಆಡಿದ ಮೇಲೆ ತನ್ನ ಶಿಷ್ಯರೊಂದಿಗೆ ಕೆದ್ರೋನ್‌ ಹಳ್ಳದ ಆಚೆಗೆ ಹೋದನು. ಅಲ್ಲಿ ಒಂದು ತೋಟ ವಿತ್ತು, ಆತನೂ ಆತನ ಶಿಷ್ಯರೂ ಅದರೊಳಗೆ ಪ್ರವೇಶಿ ಸಿದರು.

Cross references

ಆದಿಕಾಂಡ 2:15

ಆಗ ಕರ್ತನಾದ ದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್‌ ತೋಟ ವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.

ಆದಿಕಾಂಡ 3:23

ಆದದರಿಂದ ಕರ್ತನಾದ ದೇವರು ಅವನನ್ನು ಯಾವದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯಮಾಡುವದಕ್ಕೆ ಏದೆನ್‌ ತೋಟದಿಂದ ಹೊರಡಿಸಿಬಿಟ್ಟನು.ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು.

ಲೇವ್ಯಕಾಂಡ 2:6

ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ ಅದರ ಮೇಲೆ ಎಣ್ಣೆ ಸುರಿಯಬೇಕು; ಅದು ಆಹಾರ ಸಮರ್ಪಣೆಯಾಗಿದೆ.

2 ಸಮುವೇಲ 15:23

ಅರಸನು ಕಿದ್ರೋನ್‌ ಹಳ್ಳವನ್ನು ದಾಟಿದನು; ಹಾಗೆಯೇ ಅವನ ಜನರೆಲ್ಲರೂ ದಾಟಿ ಅರಣ್ಯದ ಮಾರ್ಗವಾಗಿ ನಡೆದು ಹೋದರು.

1 ಅರಸುಗಳು 15:13

ಇದಲ್ಲದೆ ಆಸನು ತನ್ನ ತಾಯಿಯಾದ ಮಾಕಾ ತೋಪಿನಲ್ಲಿ ಒಂದು ವಿಗ್ರಹವನ್ನು ಮಾಡಿಸಿ ಇಟ್ಟದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿ ಅವಳ ವಿಗ್ರಹ ವನ್ನು ಕಡಿದುಬಿಟ್ಟು ಕಿದ್ರೋನೆಂಬ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.

2 ಅರಸುಗಳು 23:6

ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.

2 ಅರಸುಗಳು 23:12

ಯೆಹೂದದ ಅರಸರು ಉಂಟು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ ಮನಸ್ಸೆಯು ಕರ್ತನ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠ ಗಳನ್ನೂ ಅರಸನು ಕೆಡವಿಸಿ ಅಲ್ಲಿಂದ ಅದರ ಧೂಳನ್ನು ಕಿದ್ರೋನ್‌ ಹಳ್ಳದಲ್ಲಿ ಹಾಕಿಸಿದನು.

2 ದಿನವೃತ್ತಾಂತ 15:16

ಇದಲ್ಲದೆ ಅರಸನಾಗಿರುವ ಆಸನ ತಾಯಿಯಾದ ಮಾಕಳನ್ನು ಕುರಿತು ಏನಂದರೆ, ಅವಳು ಒಂದು ವಿಗ್ರಹವನ್ನು ಮಾಡಿಸಿ ತೋಪಿನಲ್ಲಿ ಇರಿಸಿದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿದನು. ಇದಲ್ಲದೆ ಆಸನು ಅವಳ ವಿಗ್ರಹವನ್ನು ಕಡಿದುಹಾಕಿ ಅದನ್ನು ತುಳಿದು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.

2 ದಿನವೃತ್ತಾಂತ 30:14

ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ತೆಗೆದುಹಾಕಿದರು ಮತ್ತು ಧೂಪಪೀಠಗಳನ್ನೆಲ್ಲಾ ತೆಗೆದು ಬಿಟ್ಟು ಕಿದ್ರೋನ್‌ ಹಳ್ಳದಲ್ಲಿ ಹಾಕಿದರು.

ಯೆರೆಮಿಯ 31:40

ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.

ಮತ್ತಾಯ 26:30

ತರುವಾಯ ಅವರು ಕೀರ್ತನೆ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೋದರು.

ಮತ್ತಾಯ 26:36

ತರುವಾಯ ಯೇಸು ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ--ನಾನು ಆಚೇ ಕಡೆಗೆ ಹೋಗಿ ಪ್ರಾರ್ಥಿಸುವಾಗ ನೀವು ಇಲ್ಲೇ ಕೂತುಕೊಳ್ಳಿರಿ ಅಂದನು.

ಮಾರ್ಕ 14:26

ಬಳಿಕ ಅವರು ಒಂದು ಸಂಗೀತ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೊರಟುಹೋದರು.

ಮಾರ್ಕ 14:32

ಆಗ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದಾಗ ಆತನು ತನ್ನ ಶಿಷ್ಯರಿಗೆ--ನಾನು ಪ್ರಾರ್ಥನೆ ಮಾಡು ವಾಗ ನೀವು ಇಲ್ಲಿ ಕೂತುಕೊಂಡಿರ್ರಿ ಅಂದನು.

ಮಾರ್ಕ 14:42

ಏಳಿರಿ, ನಾವು ಹೋಗೋಣ; ಇಗೋ ನನ್ನನ್ನು ಹಿಡುಕೊಡುವವನು ಸವಿಾಪದಲ್ಲಿದ್ದಾನೆ ಎಂದು ಹೇಳಿದನು.

ಲೂಕ 22:39

ತರುವಾಯ ಆತನು ಹೊರಗೆ ಬಂದು ತನ್ನ ವಾಡಿಕೆಯಂತೆ ಎಣ್ಣೇಮರಗಳ ಗುಡ್ಡಕ್ಕೆ ಹೋದನು. ಆತನ ಶಿಷ್ಯರೂ ಆತನನ್ನು ಹಿಂಬಾಲಿಸಿದರು.

ಯೋಹಾನ 13:31

ಅವನು ಹೊರಗೆ ಹೋದಮೇಲೆ ಯೇಸು-- ಈಗ ಮನುಷ್ಯಕುಮಾರನು ಮಹಿಮೆಪಟ್ಟಿದ್ದಾನೆ. ದೇವರು ಆತನಲ್ಲಿ ಮಹಿಮೆಪಟ್ಟಿದ್ದಾನೆ.

ಯೋಹಾನ 14:1

ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

ಯೋಹಾನ 14:31

ನಾನು ತಂದೆಯನ್ನು ಪ್ರೀತಿಮಾಡುತ್ತೇನೆಂದು ಲೋಕವು ತಿಳಿಯುವ ಹಾಗೆ ತಂದೆಯು ನನಗೆ ಆಜ್ಞೆ ಕೊಟ್ಟಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ ಅಂದನು.

ಯೋಹಾನ 18:26

ಮಹಾಯಾಜ ಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧು ವಾಗಿದ್ದ ಒಬ್ಬನು--ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ನೋಡಲಿಲ್ಲವೋ ಅಂದನು.

Interlinear

Choose Theme