ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.
Cross references
ಯಾಕಂದರೆ ಮಿಂಚು ಪೂರ್ವದಿಂದ ಹೊರಟು ಬಂದು ಪಶ್ಚಿಮದವರೆಗೆ ಹೊಳೆಯು ವಂತೆಯೇ ಮನುಷ್ಯಕುಮಾರನ ಬರೋಣವೂ ಇರು ವದು.
ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರು ತ್ತಾನೋ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರ ವಾಗಿರ್ರಿ.
ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.
ಆದ ಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಎಂದು ಹೇಳಿದನು.
ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.
ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ.
ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.