Home Bibles ಮತ್ತಾಯ 25:13 · ಕನ್ನಡ ಬೈಬಲ್
ಮತ್ತಾಯ 25:13 · ಕನ್ನಡ ಬೈಬಲ್

ಆದದರಿಂದ ಎಚ್ಚರವಾಗಿರ್ರಿ; ಯಾಕಂದರೆ ಮನುಷ್ಯಕುಮಾರನು ಬರುವ ದಿನ ವನ್ನಾಗಲೀ ಗಳಿಗೆಯನ್ನಾಗಲೀ ನೀವು ಅರಿಯದವರಾ ಗಿದ್ದೀರಿ ಅಂದನು.

Cross references

ಮತ್ತಾಯ 24:42

ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರು ತ್ತಾನೋ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರ ವಾಗಿರ್ರಿ.

ಮತ್ತಾಯ 24:50

ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.

ಮಾರ್ಕ 13:33

ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು.

ಲೂಕ 21:36

ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.

ಅಪೋಸ್ತಲರ ಕೃತ್ಯಗಳು 20:31

ಆದಕಾರಣ ನಾನು ಕಣ್ಣೀರಿನಿಂದ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬ ನನ್ನು ಎಚ್ಚರಿಸಿದೆನೆಂದು ನೀವು ಜ್ಞಾಪಕ ಮಾಡಿಕೊಂಡು ಎಚ್ಚರವಾಗಿರಿ.

1 ಕೊರಿಂಥದವರಿಗೆ 16:13

ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು.

1 ತೆಸಲೋನಿಕದವರಿಗೆ 5:6

ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.

2 ತಿಮೋಥೆಯ 4:5

ಆದರೆ ನೀನು ಎಲ್ಲಾ ವಿಷಯ ಗಳಲ್ಲಿ ಎಚ್ಚರವಾಗಿರು, ಶ್ರಮೆಗಳನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು.

1 ಪೇತ್ರ 4:7

ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.

1 ಪೇತ್ರ 5:8

ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.

ಪ್ರಕಟನೆ 16:15

ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ನಿರ್ವಾಣನಾಗಿ ತಿರುಗಾಡುವಾಗ ಜನರು ತನ್ನ ನಾಚಿಕೆಯನ್ನು ನೋಡಿಯಾರೆಂದು ಎಚ್ಚರ ವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.

Interlinear

Choose Theme