Home Bibles ಮತ್ತಾಯ 1:8 · ಕನ್ನಡ ಬೈಬಲ್
ಮತ್ತಾಯ 1:8 · ಕನ್ನಡ ಬೈಬಲ್

ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು;

Cross references

1 ಅರಸುಗಳು 15:24

ಆಸನು ತನ್ನ ಪಿತೃಗಳ ಸಂಗಡ ಮಲಗಿದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ತನ್ನ ಪಿತೃಗಳ ಸಂಗಡ ಹೂಣಿಡಲ್ಪಟ್ಟನು. ಅವನಿಗೆ ಬದ ಲಾಗಿ ಅವನ ಮಗನಾದ ಯೆಹೋಷಾಫಾಟನು ಆಳಿದನು.

1 ಅರಸುಗಳು 22:2

ಮೂರನೇ ವರುಷದಲ್ಲಿ ಏನಾಯಿತಂದರೆ, ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನ ಬಳಿಗೆ ಬಂದನು.

2 ಅರಸುಗಳು 3:1

ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರುಷದಲ್ಲಿ ಅಹಾಬನ ಮಗನಾದ ಯೋರಾಮನು ಸಮಾರ್ಯ ದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹನ್ನೆರಡು ವರುಷ ಆಳಿದನು.

2 ಅರಸುಗಳು 8:16

ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಐದನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಯೆಹೋಷಾಫಾ ಟನ ಮಗನಾದ ಯೆಹೋರಾಮನು ಆಳಲಾರಂಭಿಸಿ ದನು.

2 ಅರಸುಗಳು 14:21

ಯೆಹೂದದ ಜನರು ಹದಿನಾರು ವರುಷದವನಾದ ಅಜರ್ಯನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗ ಮಾಡಿದರು.

2 ಅರಸುಗಳು 15:1

ಇಸ್ರಾಯೇಲಿನ ಅರಸನಾದ ಯಾರೊ ಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಅಮಚ್ಯನ ಮಗ ನಾದ ಅಜರ್ಯನು ಆಳಲು ಆರಂಭಿಸಿದನು.

1 ದಿನವೃತ್ತಾಂತ 3:11

ಇವನ ಮಗನು ಯೆಹೋರಾಮನು; ಇವನ ಮಗನು ಅಹಜ್ಯನು; ಇವನ ಮಗನು ಯೆಹೋವಾಷನು.

2 ದಿನವೃತ್ತಾಂತ 17:1

ಅವನ ಮಗನಾದ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು;

2 ದಿನವೃತ್ತಾಂತ 21:1

ಆದರೆ ಯೆಹೋಷಾಫಾಟನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ದಾವೀದನ ಪಟ್ಟಣ ದಲ್ಲಿ ತನ್ನ ಪಿತೃಗಳ ಸಂಗಡ ಹೂಣಲ್ಪಟ್ಟನು. ಅವನ ಮಗನಾದ ಯೆಹೋರಾಮನು ಅವನಿಗೆ ಬದಲಾಗಿ ಆಳಿದನು.

2 ದಿನವೃತ್ತಾಂತ 26:1

ಆಗ ಯೆಹೂದ ಜನರೆಲ್ಲರು ಹದಿನಾರು ವರುಷದವನಾದ ಉಜ್ಜೀಯನನ್ನು ತಕ್ಕೊಂಡು ಅವನನ್ನು ಅವನ ತಂದೆಯಾದ ಅಮಚ್ಯ ನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.

Interlinear

Choose Theme