ಆಗ ಯೆಹೂದ ಜನರೆಲ್ಲರು ಹದಿನಾರು ವರುಷದವನಾದ ಉಜ್ಜೀಯನನ್ನು ತಕ್ಕೊಂಡು ಅವನನ್ನು ಅವನ ತಂದೆಯಾದ ಅಮಚ್ಯ ನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
Cross references
ಇಸ್ರಾಯೇಲಿನ ಅರಸನಾಗಿರುವ ಯೆಹೋ ವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸ ನಾಗಿರುವ ಯೆಹೋವಾಷನ ಮಗನಾದ ಅಮಚ್ಯನು ಅರಸನಾದನು.
ಯೆಹೂದದ ಜನರು ಹದಿನಾರು ವರುಷದವನಾದ ಅಜರ್ಯನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗ ಮಾಡಿದರು.
ಇಸ್ರಾಯೇಲಿನ ಅರಸನಾದ ಯಾರೊ ಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೇ ವರುಷ ದಲ್ಲಿ ಯೆಹೂದದ ಅರಸನಾಗಿರುವ ಅಮಚ್ಯನ ಮಗ ನಾದ ಅಜರ್ಯನು ಆಳಲು ಆರಂಭಿಸಿದನು.
ಇವನ ಮಗನು ಅಮಚ್ಯನು; ಇವನ ಮಗನು ಅಜರ್ಯನು; ಇವನ ಮಗನು ಯೋತಾಮನು.
ಯೆರೂಸಲೇಮಿನ ನಿವಾಸಿಗಳು ಅವನಿಗೆ ಬದಲಾಗಿ ಅವನ ಚಿಕ್ಕ ಮಗನಾದ ಅಹಜ್ಯ ನನ್ನು ಅರಸನಾಗಿ ಮಾಡಿದರು. ದಂಡಿಗೆ ಬಂದ ಅರಬ್ಬಿಯರ ಗುಂಪು ಹಿರಿಯರನ್ನೆಲ್ಲಾ ಕೊಂದುಹಾಕಿ ದರು. ಹೀಗೆ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ಅರಸನಾಗಿ ಆಳಿದನು.
ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
ತೆಕೋವದ ಕುರುಬರಲಿದ್ದ ಆಮೋಸನು ಯೆಹೂದದ ಅರಸನಾದ ಉಜ್ಜೀಯನ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ದಿನಗಳ ಲ್ಲಿಯೂ ಭೂಕಂಪಕ್ಕೆ ಎರಡು ವರುಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ನೋಡಿದ ವಾಕ್ಯಗಳು.
ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು;